???????????????????????????????????? 
ಜಿಲ್ಲೆ

ವಿಜೃಂಭಣೆಯ ಸಿದ್ದಪ್ಪಜ್ಜನ ರಥೋತ್ಸವ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಉಣಕಲ್ ಮೂಲ ಗದ್ದುಗೆ ಮಠದ ಶ್ರೀ ಸಿದ್ದಪ್ಪಜ್ಜನವರ ರಥೋತ್ಸವ ಭಾನುವಾರ ಗೋಧೂಳಿ ಸಮಯದಲ್ಲಿ ವಿಜೃಂಭಣೆಯಿಂದ ಜರುಗಿತು.

ಬ್ರಾಹ್ಮಿಮುಹೂರ್ತದಲ್ಲಿ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತರು ಶ್ರೀಮಠಕ್ಕೆ ಆಗಮಿಸಿ ಅಜ್ಜನಿಗೆ ಕಾಯಿ-ಕರ್ಪರ ಸಮರ್ಪಿಸಿದರು.

ಸಂಜೆ ವೇಳೆ ಶ್ರೀಮಠದಿಂದ ಪಲ್ಲಕ್ಕಿ ಮೆರವಣಿಗೆ ಸಾಗಿ ಉಳವಿ ಚನ್ನಬಸವೇಶ್ವರ ದೇವಸ್ಥಾನ ತಲುಪಿತು. ಗ್ರಾಮದೆಲ್ಲೆಡೆ ಪಲ್ಲಕ್ಕಿ ಮೆರವಣಿಗೆ ಸಾಗಿ ಶ್ರೀಮಠಕ್ಕೆ ಬಂದು ಆಗಮಿಸಿತು. ರಥಕ್ಕೆ ಮಂಗಳಾರತಿ ಬೆಳಗಿ ಪಲ್ಲಕ್ಕಿಯಲ್ಲಿದ್ದ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂಡಿಸಿ, ರಥಕ್ಕೆ ಚಾಲನೆ ನೀಡಲಾಯಿತು.

ಶ್ರೀಮಠದಿಂದ ಪಾದಗಟ್ಟೆವರೆಗೆ ರಥವು ಸಾಗಿ, ಅಲ್ಲಿಂದ ಮರಳಿ ಶ್ರೀಮಠಕ್ಕೆ ಆಗಮಿಸಿತು. ಈ ವೇಳೆ ಭಕ್ತರಿಂದ ‘ಸಿದ್ದಪ್ಪಜ್ಜ ಮಹಾರಾಜ್ಕೀ ಜೈ’ ಎಂಬ ಜಯಘೊಷ ಮೊಳಗಿದವು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತರು ಕೃತಾರ್ಥರಾದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಉಮೇಶಗೌಡ ಕೌಜಗೇರಿ, ಶ್ರೀಮಠದ ಚೇರ್ಮನ್ ಚನ್ನಪ್ಪಗೌಡ ಪಾಟೀಲ, ಚನ್ನು ಪಾಟೀಲ, ಬಸಣ್ಣ ಹೆಬ್ಬಳ್ಳಿ, ಚನ್ನಬಸಪ್ಪ ಧಾರವಾಡಶೆಟ್ಟರ್ ಇತರರು ಇದ್ದರು.