ಜಿಲ್ಲೆ

ವಿಜೃಂಭಣೆಯ ಶ್ರೀ ವಾಸವಿ ಜಯಂತಿ ಆಚರಣೆ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ಶ್ರೀ ವಾಸವಿ ಜಯಂತಿ ಅಂಗವಾಗಿ ಬುಧವಾರ ಸಂಜೆ ಪಟ್ಟಣದಲ್ಲಿ ಶ್ರೀ ಕನ್ನಿಕಾಪರಮೇಶ್ವರಿ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಅಲಂಕೃತಗೊಂಡಿದ್ದ ವಾಸವಿ ರಥದಲ್ಲಿ ಉತ್ಸವ ಮೂರ್ತಿಯನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಬಳಿಕ ಮಂಗಳವಾದ್ಯ ಸಮೇತ ಆರಂಭಗೊಂಡ ಮೆರವಣಿಗೆ ಡಾ.ರಾಜ್‌ಕುಮಾರ್ ರಸ್ತೆ, ಬಸ್ತೀಪುರ ರಸ್ತೆ, ದಕ್ಷಿಣ ಬಡಾವಣೆಯಲ್ಲಿ ತೆರಳಿ ವಾಸವಿ ಮಹಲ್‌ಗೆ ತಲುಪಿತು. ಈ ವೇಳೆ ಯುವಕರು ಮೆರವಣಿಗೆ ಉದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮೆರವಣಿಗೆಯಲ್ಲಿ ಆರ್ಯವೈಶ್ಯ ಸಂಘದ ಅಧ್ಯಕ್ಷ ಎಡಿ.ಕುಮಾರ ಕೃಷ್ಣ, ಉಪಾಧ್ಯಕ್ಷ ಪಿ.ಎನ್. ಸತ್ಯನಾರಾಯಣ ಶೆಟ್ಟಿ, ಕಾರ್ಯದರ್ಶಿ ಪಿ.ಜಿ.ಶಶಿಧರ್, ಖಜಾಂಚಿ ಕೆ.ವಿ.ಶ್ರೀನಿವಾಸ್ ಗುಪ್ತ, ಬದರಿ ನಾರಾಯಣ್, ಒ.ವಿ ಸತೀಶ್, ಎಸ್.ಎನ್.ಶ್ರೀನಿವಾಸ್, ಎಸಿ ಶ್ರೀನಾಥ್ ಬಾಬು, ವಾಸವಿ ಯುವಜನ ಸಂಘದ ಅಧ್ಯಕ್ಷ ಪಿ.ಜಿ ಶ್ರೀನಿವಾಸ್ ಹಾಗೂ ಪದಾಧಿಕಾರಿಗಳು, ಮಹಿಳಾ ಸಂಘದ ಅಧ್ಯಕ್ಷೆ ಶಾಲಿನಿ ಸಚಿನ್ ಹಾಗೂ ಪದಾಧಿಕಾರಿಗಳು ಸೇರಿದಂತೆ ಮತ್ತಿತರಿದ್ದರು.