ಜಿಲ್ಲೆ

ವಿಜೃಂಭಣೆಯ ಶ್ರೀ ರಂಗನಾಥಸ್ವಾಮಿ ರಥೋತ್ಸವ

ಅರಕಲಗೂಡು: ತಾಲೂಕಿನ ಮಣಜೂರು ಗ್ರಾಮದಲ್ಲಿ ಶ್ರೀ ರಂಗನಾಥಸ್ವಾಮಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಬೆಳಗ್ಗೆ ದಾಸನಪುರದಿಂದ ಉತ್ಸವಮೂರ್ತಿಗಳನ್ನು ಮೆರವಣಿಗೆಯಲ್ಲಿ ಕರೆತಂದು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಬಳಿಕ ನೆರೆದಿದ್ದ ಗ್ರಾಮಸ್ಥರು ಹಾಗೂ ಭಕ್ತರು ತೇರನ್ನು ಜಾತ್ರೆ ಮಾಳದವರೆಗೆ ಎಳೆದು ಸಂಭ್ರಮಿಸಿದರು. ಸಂಜೆ ತೇರನ್ನು ಮತ್ತೆ ಮರಳಿ ಗ್ರಾಮಕ್ಕೆ ಎಳೆದು ತರಲಾಯಿತು.

ನಂತರ ತೆಪ್ಪೋತ್ಸವ, ಉರುಬತ್ತಿ ಸೇವೆ ನಡೆಸಲಾಯಿತು. ಸೋಮವಾರ ಗ್ರಾಮದಲ್ಲಿ ನಡೆದ ಕಟ್ಟೆ ಜಾತ್ರೆ ಬಳಿಕ ಉತ್ಸವಮೂರ್ತಿಗಳನ್ನು ಮೆರವಣಿಗೆಯಲ್ಲಿ ಬೆಟ್ಟ ಹತ್ತಿಸಿ ದೇವಾಲಯಕ್ಕೆ ಕೊಂಡೊಯ್ಯಲಾಯಿತು.