ಜಿಲ್ಲೆ

ವಿಜಯವಾಣಿ,ದಿಗ್ವಿಜಯ,ಎಸ್‌ಆರ್‌ಎಸ್ ಸಹಯೋಗದಲ್ಲಿ ಯೋಗ ದಿನಾಚರಣೆ, ಎಸ್‌ಪಿ ಕೆ.ಪರಶುರಾಮ್ ಉದ್ಘಾಟನೆ

ಚಿತ್ರದುರ್ಗ: ಕನ್ನಡದ ನಂ.1 ದಿನ ಪತ್ರಿಕೆ,ದಿಗ್ವಿಜಯ ಸುದ್ದಿವಾಹಿನಿ ಹಾಗೂ ಎಸ್‌ಆರ್‌ಎಸ್ ಶಿಕ್ಷಣ ಸಹಯೋಗದಲ್ಲಿ ಬುಧವಾರ ನಗ ರದ ಎಸ್‌ಆರ್‌ಎಸ್ ಕಾಲೇಜಿನಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಕಾಲೇಜಿನ ಅನಂತಕೃಷ್ಣ ಸಭಾಂಗಣ ದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಕಾರ‌್ಯಕ್ರಮವನ್ನು ಎಸ್‌ಪಿ ಕೆ.ಪರಶುರಾಮ್ ಉದ್ಘಾಟಿಸಿ ಮಾತನಾಡಿದರು.

ಯೋಗ,ಸಾಧನೆಯಿಂದ ಸಿದ್ಧಿಸುತ್ತದೆ. ಎಲ್ಲ ರೋಗಗಳಿಗೂ ಯೋಗಭ್ಯಾಸ ರಾಮಬಾಣವಾಗಿದೆ ಎಂದು ಅಭಿಪ್ರಾಯಪಟ್ಟರು. ಯೋ ಗ ಶಿಕ್ಷಕ ಎಂ.ಬಿ.ಮುರುಳಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ವಿಜಯವಾಣಿ ಮುಖ್ಯಉಪ ಸಂಪಾದಕ ಹರ್ಷ ಎನ್. ಪುರೋಹಿತ,ಎಸ್‌ಆರ್‌ಎಸ್ ಶಾಲೆ ಪ್ರಾಚಾರ‌್ಯ ಪ್ರಭಾಕರ್,ವಿಜಯವಾಣಿ,ದಿಗ್ವಿಜಯ ಹಾಗೂ ಎಸ್‌ಆರ್‌ಎಸ್ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.