ಜಿಲ್ಲೆ

ವಿಜಯವಾಣಿ ಸಹಭಾಗಿತ್ವದ ಯೋಗ ದಿನಾಚರಣೆ ಯಶಸ್ವಿ

ಹಾಸನ: ವಿಶ್ವ ಯೋಗ ದಿನದ ಅಂಗವಾಗಿ ಎಸ್‌ಬಿಎಂ ಬಡಾವಣೆಯ ಸಿದ್ಧಿ ವಿನಾಯಕ ಗಣಪತಿ ದೇವಾಲಯದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಯೋಗ ಮಾಡುವ ಮೂಲಕ ಯೋಗ ದಿನ ಆಚರಿಸಲಾಯಿತು. ಇದೇ ವೇಳೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಹಾಸನದ ಜೀವ ರಕ್ಷ ರಕ್ತ ಕೇಂದ್ರ, ಜೀವ ಜ್ಯೋತಿ ಆಸ್ಪತ್ರೆ, ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ ಸಮಿತಿ, ಆಕಾಶವಾಣಿ, ವಿಜಯವಾಣಿ ದಿನಪತ್ರಿಕೆ ಹಾಗೂ ಅಡಗೂರಿನ ಯೋಗ ಚೇತನ ಕೇಂದ್ರ ವತಿಯಿಂದ ಎಸ್‌ಬಿಎಂ ಕಾಲೋನಿಯ ವಿನಾಯಕ ದೇವಾಲಯ ಆವರಣದಲ್ಲಿ ಶುಕ್ರವಾರ ಬೆಳಗ್ಗೆ 5.30ರಿಂದ ಯೋಗ ಆರಂಭಿಸಲಯಿತು. ಎರಡು ಗಂಟೆಗಳ ಕಾಲ ನಡೆದ ಯೋಗದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಎಂಟು ಗಂಟೆಯ ಬಳಿಕ ನಗರದ ಜೀವ ಜ್ಯೋತಿ ಆಸ್ಪತ್ರೆ ಸಿಬ್ಬಂದಿ ನೆರೆದಿದ್ದ ಎಲ್ಲರಿಗೂ ಉಚಿತ ವೈದ್ಯಕೀಯ ತಪಾಸಣೆ ಮಾಡಿದರು. ಜೀವ ರಕ್ಷ ರಕ್ತ ಕೇಂದ್ರದ ಸಿಬ್ಬಂದಿ ದಾನಿಗಳಿಂದ ರಕ್ತ ಸಂಗ್ರಹಿಸಿದರು. ಸುಮಾರು 50ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ನಂತರ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಾಸನ ವಿವಿ ಕುಲಪತಿ ಡಾ.ಟಿ.ಸಿ. ತಾರಾನಾಥ್ ಅವರು ಮಾತನಾಡಿ, ಭಾರತದ ಪರಂಪರೆ ವಿಶ್ವದಲ್ಲೇ ಅಗ್ರಮಾನ್ಯವಾದದ್ದು. ನಮಗೆ ನಮ್ಮದೆಯಾದ ಇತಿಹಾಸವಿದೆ, ಮಹತ್ವವಿದೆ. ಎಲ್ಲ ಸಂಸ್ಕೃತಿಗಳ ಸ್ವಂತಿಕೆ ನೆಲಗಟ್ಟಿನಲ್ಲಿ ಅರಳಿ ವಿಕಾಸವಾದ ಸಂಸ್ಕೃತಿ ಇದೆ ಎಂದು ಹೇಳಿದರು.
ಈ ಜಗತ್ತಿನಲ್ಲಿ ಜೀವಿಗಳು ಧಾತುಗಳಿಂದ ವಿಕಸನಗೊಂಡಿತು ಎಂದು ವಿಜ್ಞಾನ ಹೇಳುತ್ತದೆ. ಇಂದು ನಾವು ಮನುಷ್ಯರು ಯೋಗದ ಮೂಲಕ ಶಾರೀರಿಕ, ಮಾನಸೀಕ, ಬೌದ್ಧಿಕವಾಗಿ ವಿಕಸನವಾಗಬೇಕು. ಯೋಗ ನಮ್ಮ ದಿನದಿತ್ಯದ ಚಟುವಟಿಕೆಯಾಗಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಅಡಗೂರಿನ ಯೋಗ ಚೇತನ ಕೇಂದ್ರದ ಚೇತನ್ ಗುರೂಜಿ, ಡಾ.ನಾಗೇಶ್,