ಕೊಳವಿ: ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣ ಸಂಯೋಜಕ ಬಿ.ಎಂ.ವನ್ನೂರ ಹೇಳಿದರು.
ಸ್ಥಳಿಯ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿಮಿತ್ರ ಪುರವಣಿ ವಿತರಣೆ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಉತ್ತಮ ಅಂಕ ಪಡೆಯಲು, ವಿಷಯ ಪರಿಣತರಿಂದ ಪಾಠ ಅರಿಯಲು, ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಮತ್ತು ಸುತ್ತಮುತ್ತಲಿನ ಆಗುಹೋಗು ತಿಳಿದುಕೊಳ್ಳಲು ವಿಜಯವಾಣಿ ವಿದ್ಯಾರ್ಥಿ ಮಿತ್ರ ಓದಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಳೆದ ಶೈಣಿಕ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀೆಯಲ್ಲಿ ಗೋಕಾಕ ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳ ಪೈಕಿ ಕೊಳವಿ ಶಾಲೆ ಪ್ರಥಮ ಸ್ಥಾನ ಪಡೆದಿದೆ. ಇದು ಜಿಪಂ ಮಾಜಿ ಸದಸ್ಯ ಟಿ.ಆರ್. ಕಾಗಲ್ ಅವರು 9 ತಿಂಗಳವರೆಗೆ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿಮಿತ್ರ ಪುರವಣಿ ಉಚಿತವಾಗಿ ನೀಡಿದ ಲಶೃತಿ ಎಂದು ಶ್ಲಾಘಿಸಿದರು.
ಮುಖ್ಯ ಶಿಕ ಎಂ.ಬಿ. ಮುತ್ನಾಳ ಮಾತನಾಡಿ, ವಿಜಯವಾಣಿ ವಿದ್ಯಾರ್ಥಿಮಿತ್ರ ಪುರವಣಿ ಗ್ರಾಮೀಣ ವಿದ್ಯಾರ್ಥಿಗಳ ಓದಿಗೆ ದಾರಿ ದೀಪವಾಗಿದ್ದು, ಕೇವಲ ಒಂದು ರೂಪಾಯಿಯಲ್ಲಿ ವಿಷಯ ಪಾಠಗಳು, ಸಾಮಾನ್ಯ ಜ್ಞಾನ, ಚಿತ್ರಕಲೆ, ಮಾದರಿ ಪ್ರಶ್ನೋತ್ತರಗಳು ಪುರವಣಿಯಲ್ಲಿ ಸಿಗುತ್ತವೆ. 2024&25ನೆಯ ಶೆಣಿಕ ಸಾಲಿನ ಎಲ್ಲ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಟಿ.ಆರ್. ಕಾಗಲ್ ಅವರು ಎರಡನೇ ಬಾರಿ ನಿರಂತರ 9 ತಿಂಗಳವರೆಗೆ ವಿದ್ಯಾರ್ಥಿ ಮಿತ್ರ ಪುರವಣಿ ಉಚಿತವಾಗಿ ನೀಡಲಿದ್ದಾರೆ. ಅವರ ಸೇವೆಯನ್ನು ಎಲ್ಲ ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು ಎಂದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಮಹೇಶ ವಿಜಾಪುರ ಮಾತನಾಡಿ, ಉಚಿತವಾಗಿ ಪುರವಣಿ ದೊರೆಯುತ್ತದೆ ಎಂದು ರ್ನಿಲಸಬಾರದು. ಏಕೆಂದರೆ ನಾವು ಪುರವಣಿಯನ್ನು ಉಚಿತವಾಗಿ ನೀಡುವುದಿಲ್ಲ. ಇದರ ಹಿಂದೆ ಒಬ್ಬರ ಪರಿಶ್ರಮ ಇರುತ್ತದೆ. ಅವರು ಅದರ ವೆಚ್ಚ ಭರಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಟಿ.ಆರ್. ಕಾಗಲ ಅವರ ಕೊಡುಗೆ ಅಪಾರ. ಇಂತಹ ಶಿಣ ಪ್ರೇಮಿಗಳು ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಮುಂದಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಆವತ್ತಿ ಸ್ಥಾನಿಕ ಸಂಪಾದಕ ಮಹೇಶ ವಿಜಾಪುರ, ಪ್ರಸಾರಂಗ ವ್ಯವಸ್ಥಾಪಕ ರುವೀರ ಕುಲಕರ್ಣಿ, ತಾಲೂಕು ಇಸಿಒ ಅಧಿಕಾರಿ ಬಿ.ಎಂ. ವನ್ನೂರ ಮತ್ತು ಗ್ರಾಪಂ ಅಧ್ಯ ಸಿದ್ದಪ್ಪ ಸಿಂಗಮನವರ ಅವರನ್ನು ಶಾಲಾ ಮುಖ್ಯಶಿಕ ಹಾಗೂ ಶಿಕರು ಸತ್ಕರಿಸಿದರು.
ಗ್ರಾಪಂ ಸದಸ್ಯರಾದ ಕರೆಪ್ಪ ಬಡಿಗವಾಡ, ಮಾರುತಿ ಹಂಜಿ, ಪಿಕೆಪಿಎಸ್ ಕಾರ್ಯದರ್ಶಿ ಬಾಳಯ್ಯ ಪೂಜೇರಿ, ಮುಖಂಡರಾದ ಶಿವಾನಂದ ಮಮದಾಪುರ, ಶಂಕರ ವನಕಿ, ರಾಮಣ್ಣ ಖಾನಾಪುರ ಹಾಗೂ ಪತ್ರಿಕೆ ವರದಿಗಾರ, ವಿತರಕ ಸಂಗಮೇಶ ಅಂಗಡಿ ಮತ್ತು ಶಾಲಾ ಶಿಕರಾದ ಎಸ್.ಎಚ್. ಭಜಂತ್ರಿ, ಕುಮಾರ ಬಡಿಗೇರ, ಸವಿತಾ ಮುತ್ನಾಳ, ಎಸ್.ಕೆ. ಬೆಂಡವಾಡ ಉಪಸ್ಥಿತರಿದ್ದರು. ಬಿ.ಎ.ಮಲಗೌಡನವರ ಸ್ವಾಗತಿಸಿದರು. ಮಹೇಶ್ವರಿ ಸರಕಪ್ಪಗೋಳ ನಿರೂಪಿಸಿದರು. ಎ.ಎಸ್.ನಗಾರ್ಚಿ ವಂದಿಸಿದರು.