ಜಿಲ್ಲೆ

ವಿಜಯವಾಣಿ-ದಿಗ್ವಿಜಯ ಸಹಯೋಗದಲ್ಲಿ 4 ದಿನಗಳ ಫರ್ನಿಚರ್ ಎಕ್ಸ್‌ಪೊಗೆ ಚಾಲನೆ

reportermys

ಹಾಸನ : ಕನ್ನಡದ ನಂ.1 ಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ವತಿಯಿಂದ ನಗರದ ಬಿಎಂ ರಸ್ತೆಯಲ್ಲಿರುವ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಮಾ.18ರಿಂದ 21ರವರೆಗೆ ಆಯೋಜಿಸಿರುವ ಫರ್ನಿಚರ್ ಮತ್ತು ಹೋಂ ಇಂಟೀರಿಯರ್ ಎಕ್ಸ್‌ಪೊ ಅನ್ನು ರಾಜೀವ್ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿ ಎಸ್ ಎ ನಿತಿನ್ ಹಾಗೂ ಹಾಸನ ನಗರಸಭೆ ಅಧ್ಯಕ್ಷ ಆರ್. ಮೋಹನ್ ಕುಮಾರ್ ಅವರು ಶನಿವಾರ ಉದ್ಘಾಟಿಸಿದರು.

ಶನಿವಾರದಿಂದ ಆರಂಭವಾಗುವ ಎಕ್ಸ್‌ಪೋ ಮಂಗಳವಾರದವರೆಗೆ ನಡೆಯಲಿದೆ. ಬೆಳಗ್ಗೆ 10.30ರಿಂದ ರಾತ್ರಿ 9 ಗಂಟೆಯವರೆಗೆ ನಾಲ್ಕು ದಿನಗಳ ಕಾಲ ಮಳಿಗೆಗಳು ತೆರೆದಿರಲಿವೆ. ಎಕ್ಸ್‌ಪೋನಲ್ಲಿ ಒಟ್ಟು 7 ಮಳಿಗೆಗಳು ಇರಲಿದ್ದು, 6 ಮಳಿಗೆಗಳು ಬೆಂಗಳೂರಿನಿಂದ ಬಂದಿವೆ. ಒಂದು ಸ್ಟಾಲ್ ಕೇರಳದಿಂದ ಆಗಮಿಸಿದೆ. ಮಸಾಜ್ ಚೇರ್, ವಿವಿಧ ಬಗೆಯ ಕಾರ್ಪೆಟ್, ಫೌಂಟೆನ್, 3ಡಿ ಫೋಟೋ, ಸ್ಟೌವ್, ಕಿಚನ್ ಕ್ಯಾಬಿನೆಟ್, ಕಾಟ್, ಹೈ ಎಂಡ್ ಸೋಫಾ, ಕಾರ್ನರ್ ಸೋಫಾ ಸೆಟ್, ಜೂಲಾ ಸೋಫಾ ಸೆಟ್, ಬೆಡ್ ರೂಂ ಮಂಚಗಳು, ವಿವಿಧ ಬಗೆಯ ಡೈನಿಂಗ್ ಟೇಬಲ್‌ಗಳು ಭಾರೀ ರಿಯಾಯಿತಿ ದರದಲ್ಲಿ ದೊರೆಯಲಿವೆ. ಯುಗಾದಿ ಪ್ರಯುಕ್ತ ಶೇ.70ರಷ್ಟು ರಿಯಾಯಿತಿ ಇರಲಿದೆ. ಇದಲ್ಲದೆ ಬಜಾಜ್ ಫೈನಾನ್ಸ್‌ನಿಂದ ಇಎಂಐ ಸೌಲಭ್ಯ ಸಹ ಇದೆ. ಕೈಗೆಟಕುವ ದರದಲ್ಲಿ ಮನೆಯ ಅಂದವನ್ನು ಹೆಚ್ಚಿಸುವ ಪೀಠೋಪಕರಣಗಳನ್ನು ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳುವವರು ಎಕ್ಸ್‌ಪೋಗೆ ಭೇಟಿ ನೀಡಿ ನಿಮಗೆ ಇಷ್ಟವಾಗುವ ವಸ್ತುಗಳನ್ನು ಖರೀದಿ ಮಾಡಬಹುದು. ಅತ್ಯುತ್ತಮ ಗುಣಮಟ್ಟದ ಮರವನ್ನು ಬಳಸಿ ತಯಾರಿಸಲಾಗಿರುವ ಈ ಎಲ್ಲ ಪೀಠೋಪಕರಣಗಳಿಗೆ ಮೂರರಿಂದ ಐದು ವರ್ಷಗಳವರೆಗೆ ಗ್ಯಾರಂಟಿ ಸಹ ಇರಲಿದೆ. ಗ್ರಾಹಕರ ಆಯ್ಕೆಗೆ ತಕ್ಕಂತೆ ವಿವಿಧ ವಿನ್ಯಾಸಗಳ ಫರ್ನಿಚರ್‌ಗಳು ಹಾಗೂ ಮನೆ ಅಲಂಕಾರಿಕ ವಸ್ತುಗಳು ಒಂದೇ ಸೂರಿನಡಿ ಸಿಗಲಿವೆ.

ಎಕ್ಸ್‌ಪೋಗೆ ಚಾಲನೆ ನೀಡಿ ಮಾತನಾಡಿದ ರಾಜೀವ್ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿ ಎಸ್ ಎ ನಿತಿನ್, ಎಲ್ಲ ವಿನ್ಯಾಸದ ಫರ್ನಿಚರ್‌ಗಳು, ಸೋಫಾ ಸೆಟ್, ಕಾಟ್‌ಗಳು ಹಾಗೂ ಎಲ್ಲಾ ಮಾದರಿಯ ಅಲಂಕಾರಿಕ ವಸ್ತುಗಳು ಇಲ್ಲಿ ಸಿಗುತ್ತಿವೆ. ಅಲ್ಲದೇ ಕಡಿಮೆ ಬೆಲೆಗೆ ಅತ್ಯುತ್ತಮ ಗುಣಮಟ್ಟದ ಫರ್ನಿಚರ್‌ಗಳು ದೊರೆಯಲಿವೆ. ಹಾಸನ ನಗರದ ಜನತೆ ಇಲ್ಲಿಗೆ ಭೇಟಿ ನೀಡಿ, ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಎಕ್ಸ್‌ಪೋ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಆರ್. ಮೋಹನ್ ಕುಮಾರ ಅವರು, ಇಲ್ಲಿನ ಫರ್ನಿಚರ್‌ಗಳು ತುಂಬಾ ಅತ್ಯಾಕರ್ಷಕವಾಗಿವೆ. ಯುಗಾದಿ ಹಬ್ಬದ ಪ್ರಯುಕ್ತ ಶೇ.70 ರಷ್ಟು ರಿಯಾಯಿತಿ ಇರುವುದರಿಂದ ಕಡಿಮೆ ಬೆಲೆಗೆ ಪೀಠೋಪಕರಣಗಳು ಸಿಗುತ್ತಿವೆ. ಅಲ್ಲದೇ ಇಎಂಐ ಸೌಲಭ್ಯವನ್ನು ಸಹ ಕಲ್ಪಿಸಿಕೊಟ್ಟಿದ್ದಾರೆ. ಹಾಸನ ನಗರದ ಜನತೆ ಇಲ್ಲಿಗೆ ಬಂದು ತಮಗೆ ಇಷ್ಟವಾಗುವ ಫರ್ನಿಚರ್‌ಗಳನ್ನು ಖರೀದಿಸಿ ಎಂದರು.