ಜನವಾಡ ಗ್ರಾಮದ ಶ್ರೀ ವಿಜಯಲಕ್ಷ್ಮೀ ಸೊಸೈಟಿಗೆ ಅಧ್ಯಕ್ಷರಾಗಿ ನಿಂಗಪ್ಪ ಮುಧಾಳೆ ಮತ್ತು ಉಪಾಧ್ಯಕ್ಷರಾಗಿ ಸ್ವಪ್ನಿಲ್ ಪಾಟೀಲ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು..ರಮೇಶ ಚೌಗುಲೆ, ಮಲ್ಲು ಮುಧಾಳೆ, ಸನಾತನ ಮಗದುಮ್ಮ, ಸುನೀತಾ ಮಗದುಮ್ಮ, ಸುಮನ ಖೋತ, ಆನಂದ ಚೌಗಲೆ, ಮಹಾದೇವ ಪಾಟೀಲ ಇತರರಿದ್ದರು. 
ಜಿಲ್ಲೆ

ವಿಜಯಲಕ್ಷ್ಮೀ ಸೊಸೈಟಿಗೆ ನಿಂಗಪ್ಪ ಅಧ್ಯಕ್ಷ

ಪ್ರಶಾಂತ ಹೂಗಾರ

ಬೋರಗಾಂವ: ಸಮೀಪದ ಜನವಾಡ ಗ್ರಾಮದ ಶ್ರೀ ವಿಜಯಲಕ್ಷ್ಮೀ ಕೋ-ಆಪ್ ಕ್ರೆಡಿಟ್ ಸೊಸೈಟಿಗೆ ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ನಿಂಗಪ್ಪ ಮುಧಾಳೆ, ಉಪಾಧ್ಯಕ್ಷರಾಗಿ ಸ್ವಪ್ನಿಲ್ ಪಾಟೀಲ ಮತ್ತು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರು: ದತ್ತಾತ್ರೇಯ ಮಡಿವಾಳ, ನಾರಾಯಣ ಹಿರವೆ, ನಿಂಗಪ್ಪ ಮುಧಾಳೆ, ಪಿರಗೌಡ ಚೌಗುಲೆ, ವಿಜಯ ಪವಾರ, ವಿಜಯ ಹಂಡೆೆ, ಸನಾತನ ಮಗದುಮ್ಮ, ಸುಭಾಷ ಪಾಟೀಲ, ಸ್ವಪ್ನಿಲ್ ಪಾಟೀಲ್, ತಿಪ್ಪಣ್ಣ ಪೂಜಾರಿ, ಶ್ರೀಕಾಂತ ಶಾಂಡಗೆ, ಅರುಣ ಮೇಸ್ತ್ರಿ, ಸುನೀತಾ ಮಗದುಮ್ಮ, ಸುಮನ ಖೋತ. ಗ್ರಾಪಂ ಮಾಜಿ ಸದಸ್ಯ ಡಾ.ರಮೇಶ ಚೌಗುಲೆ ಮಾತನಾಡಿ, ರೈತರ ಹಿತಕ್ಕೆ ಬದ್ಧವಾಗಿ ಗ್ರಾಮೀಣ ಪ್ರದೇಶದ ಆರ್ಥಿಕ ನಾಡಿಯಾಗಿ ವಿಜಯಲಕ್ಷ್ಮೀ ಸಂಸ್ಥೆ ಹೆಸರುವಾಸಿಯಾಗಿದೆ ಎಂದರು.

ಚುನಾವಣಾಕಾರಿಯಾಗಿ ಉದಯ ಪಾಟೀಲ ಕಾರ್ಯನಿರ್ವಹಿಸಿದರು.ಸಂಸ್ಥೆಯ ವ್ಯವಸ್ಥಾಪಕ ಪುಂಡಲೀಕ ಖಾಪರೆ ಸ್ವಾಗತಿಸಿದರು. ಅಧ್ಯಕ್ಷ, ಉಪಾಧ್ಯಕ್ಷರ ಜತೆಗೆ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ಕಾಶಿಬಾಯಿ ಚೌಗುಲೆ ಹಾಗೂ ಉಪಾಧ್ಯಕ್ಷೆಯಾಗಿ ಸುರೇಖಾ ಕೋರೆ ಅವಿರೋಧ ಆಯ್ಕೆಯಾಗಿದ್ದಕ್ಕೆ ಸತ್ಕರಿಸಲಾಯಿತು.

ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ ಮುಧಾಳೆ, ಧೋಂಡಿರಾಂ ಪಾಟೀಲ, ಡಾ.ಆನಂದ ಚೌಗುಲೆ, ಮಲ್ಲು ಮುಧಾಳೆ, ದಾದಾಸಾಬ್‌ಘಾಟಗೆ, ಪಿರಗೊಂಡ ಮಗದುಮ್ಮ, ಭೀಮಾ ಚೌಗುಲೆ, ಪ್ರದೀಪ ಮೊಕಾಶಿ, ಮಹಾದೇವ ಪಾಟೀಲ ಇತರರಿದ್ದರು.