ಜಾನೇಕಲ್ ಗ್ರಾಮದಲ್ಲಿ ಬುಧವಾರ ಜೀವೈಕ್ಯ ಶ್ರೀ ವಿಜಯರುದ್ರ ಮಹಾಸ್ವಾಮಿಗಳ 10ನೇ ಜಾತ್ರೋತ್ಸವ ನಿಮಿತ್ತ ಉಚ್ಚಾಯಕ್ಕೆ ಕಿಲ್ಲೇ ಬೃಹನ್ಮಠ ಶಾಂತಮಲ್ಲ ಶಿವಾಚಾರ್ಯರು ಚಾಲನೆ ನೀಡಿದರು.ಅಮರೇಗೌಡ ಪಾಟೀಲ್, ನಿಲ್ಲಪ್ಪಗೌಡ ಪಾಟಿಲ್ ಇತರರಿದ್ದರು. 
ಜಿಲ್ಲೆ

ವಿಜಯರುದ್ರ ಸ್ವಾಮಿಗಳ ಉಚ್ಚಾಯ ಅದ್ದೂರಿ

ನರೇಶ್ ಕುಮಾರ್

ಮಾನ್ವಿ: ತಾಲೂಕಿನ ಜಾನೇಕಲ್ ಗ್ರಾಮದ ಜೀವೈಕ್ಯ ವಿಜಯರುದ್ರ ಮಹಾಸ್ವಾಮಿಗಳ ಮಠದ ಆವರಣದಲ್ಲಿ ಬುಧವಾರ ಮಹಾಸ್ವಾಮಿಗಳ 10ನೇ ಜಾತ್ರೋತ್ಸವಕ್ಕೆ ರಾಯಚೂರಿನ ಸಾವಿರದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಚಾಲನೆ ನೀಡಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಜನಪದ ಕಲಾ ತಂಡಗಳೊಂದಿಗೆ ಉಚ್ಚಾಯ ಮಹೋತ್ಸವ ಜರುಗಿತು. ಶ್ರೀಮಠದ ಸೂಗೂರಯ್ಯ ಆರ್.ಎಸ್. ಹಿರೇಮಠ, ಜಾನೇಕಲ್ ಗ್ರಾಪಂ ಅಧ್ಯಕ್ಷ ಚನ್ನಬಸವ ಪೊಲೀಸ್ ಪಾಟೀಲ್, ಕೊಡೆಕಲ್ ಗಂಗಾಧರ ಶಾಸ್ತ್ರಿಗಳು, ದೊಡ್ಡಬಸಯ್ಯ ಶಾಸ್ತ್ರಿಗಳು, ಸಿದ್ದಯ್ಯಸ್ವಾಮಿ ಗುಡದೂರು, ಗ್ರಾಮದ ಮುಖಂಡರಾದ ಅಮರೇಗೌಡ ಪಾಟೀಲ್, ನೀಲಪ್ಪಗೌಡ ಪಾಟೀಲ್, ಮೌನೇಶಗೌಡ, ಹೊಸಗೌಡರು ಬಸವರಾಜಪ್ಪ, ಅಮರೇಶ ನಾಯಕ, ಚಾಮರಸ ಮಾಲಿಪಾಟೀಲ್, ಬಸವರಾಜ ನಾಯಕ, ಕೆ.ಅಯ್ಯಣ್ಣ, ಶಿವಕುಮಾರಸ್ವಾಮಿ ಇತರರಿದ್ದರು.