ಜಿಲ್ಲೆ

ವಿಜಯಪುರದಲ್ಲಿ ವಿಚಾರ ಸಂಕಿರಣ

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಿಜಯಪುರದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ವಿಚಾರ ಸಂಕಿರಣದಲ್ಲಿ ರಾಜ್ಯದ 30ಜಿಲ್ಲೆಗಳಿಂದ ಪದಾಧಿಕಾರಿಗಳು, ಪತ್ರಕರ್ತರು ಆಗಮಿಸಿದ್ರು. ಅಕ್ಕಮಹಾದೇವಿ ವಿವಿ ಆವರಣದಲ್ಲಿರುವ ಕನ್ನಡ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣವನ್ನು ವಿವಿ ಕುಲಪತಿ ಪ್ರೊ. ನಾಮದೇವಗೌಡ ಉದ್ಘಾಟಿಸಿದ್ರು. ಕಾನಿಪ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ರು, ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಗೋಪಾಲ ನಾಯಕ್, ಬಿ ವಿ ಮಲ್ಲಿಕಾರ್ಜುನಯ್ಯ, ಹೆಚ್ ಬಿ ಮದನಗೌಡ ಆಗಮಿಸಿದ್ರು. ರಶ್ಮಿ ಎಸ್, ಪ್ರೊ. ಆರ್ ಸುನಂದಮ್ಮ ಉಪಸ್ಥಿತಿ ಇದ್ದರು. ವಿಚಾರ ಸಂಕಿರಣದಲ್ಲಿ ಮಾಧ್ಯಮ ಕ್ಷೇತ್ರದ ತಲ್ಲಣಗಳು ಹಾಗೂ ಪತ್ರಿಕೋದ್ಯಮದ ಇಂದಿನ ಸ್ಥಿತಿಗತಿಗಳ ಕುರಿತು ಚರ್ಚಿಸಲಾಯಿತು. ಮಾಧ್ಯಮಗಳು ಔದ್ಯೋಗಿಕವಾಗಿ ಮಾರ್ಪಾಡಾಗದೆ ಸಾಮಾಜಿಕ ಕಾಳಜಿಗಾಗಿ ಸೇವೆ ಸಲ್ಲಿಸಿದ್ರೆ ಮಾತ್ರ ಪತ್ರಿಕೋದ್ಯಮ ಮಾಧ್ಯಮ ಆಗಿ ಉಳಿಯಲು ಸಾಧ್ಯ. ಇಲ್ಲವಾದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ತಲ್ಲಣಗಳು ಇರಲಿವೆ ಎಂದು ವಿವಿ ಕುಲಪತಿ ಪ್ರೊ. ನಾಮದೇವಗೌಡ ಹೇಳಿದ್ರು. ಅಲ್ಲದೆ ರವಿ ಕಾಣದ್ದನ್ನು ಕವಿ ಕಂಡ ಎಂಬ ಗಾದೆ ಮಾತಿದೆ, ಆದರೆ ಅದು ಪ್ರಸ್ತುತವಾಗಿ ರವಿ ಕಾಣದ್ದನ್ನು ಪತ್ರಕರ್ತ ಕಂಡ ಎಂದರೂ ತಪ್ಪಾಗಲಾರದು ಎಂದ್ರು. ಕಾರ್ಯಕ್ರಮದಲ್ಲಿ ಪ್ರೊ. ಓಂಕಾರ ಕಾಕಡೆ, ಜಿ ಸಿ ಲೋಕೇಶ, ಸಚೆಂದ್ರ ಲಂಬು, ವಿನಾಯಕ‌ ಸೊಂಡೂರು, ದೇವೇಂದ್ರ ಹೆಳವರ ಸ್ವಾಗತ ಬಯಸಿದ್ರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಘಟಕ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಯೋಗಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.