ಜಿಲ್ಲೆ

ವಿಜಯಪುರದಲ್ಲಿ ಬ್ರಾಹ್ಮಣ ವಧು-ವರಾನ್ವೇಷಣೆ

ವಿಜಯಪುರ: ವಿಜಯಪುರದಲ್ಲಿ 36ನೇ ರಾಜ್ಯಮಟ್ಟದ ಬೃಹತ್ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶ ನಡೆಯಲಿದೆ ಎಂದು ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಪ್ತಪದಿ ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ಎಸ್ ಶ್ರೀನಿವಾಸ ತಿಳಿಸಿದ್ರು. ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ, ಸಪ್ತಪದಿ ಫೌಂಡೇಷನ್ ಹಾಗೂ ವಿವಿಧ ಬ್ರಾಹ್ಮಣ ಸಂಘಟನೆಗಳ ನೇತ್ರತ್ವದಲ್ಲಿ ಇದೇ ಫೆಬ್ರುವರಿ 27 ರಂದು ಕಾರ್ಯಕ್ರಮ ನಡೆಸಲಾಗುತ್ತಿದೆ. ವಿಜಯಪುರ ನಗರದಲ್ಲಿರುವ ಶ್ರೀ ಅನಂತಲಕ್ಷ್ಮೀ ಮಂಗಲ ಕಾರ್ಯಾಲಯದಲ್ಲಿ ಅಂದು ಬೆಳಗ್ಗೆ 9ರಿಂದ ಸಾಯಂಕಾಲ 5ಗಂಟೆಯ ವರೆಗೆ ವಧು-ವರರ ಸಮಾವೇಶ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಆನಂದ ಜೋಶಿ ತಿಳಿಸಿದ್ದಾರೆ. ವಧು-ವರಾನ್ವೇಷಣಾ ಸಮಾವೇಶದಲ್ಲಿ ಯುವ ಹೆಣ್ಣುಮಕ್ಕಳಿಗೆ ಹಾಗೂ ವಿಕಲಚೇತನರಿಗೆ ಉಚಿತವಾಗಿ ನೋಂದಣಿ ಮಾಡಿಕೊಡಲಾಗುವುದು. ಜೊತೆಗೆ ಅನ್ವಣೆಷಣೆಯಲ್ಲಿ ಬಡ ವಧು-ವರರು ಇಷ್ಟಪಟ್ಟರೆ ಅವರಿಗೆ ಉಚಿತವಾಗಿ ವಿವಾಹ ಮಾಡಿಕೊಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ. ಸಮಾವೇಶದಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ವಧು-ವರರು ಭಾಗವಹಿಸಲಿದ್ದಾರೆ. ಹೀಗಾಗಿ ವಿಜಯಪುರದ ವಧು-ವರರು 21ರಿಂದ 26ರ ಒಳಗೆ ತಮ್ಮ ಇತ್ತೀಚಿನ ಭಾವಚಿತ್ರ, ಜಾತಕ, ಬಯೋಡಾಟಾ ತಂದು ನೋಂದಾಯಿಸಿಕೊಳ್ಳಬೇಕು ಎಂದು ಬ್ರಾಹ್ಮಣ ಸಂಘ ವಿನಂತಿಸಿದೆ. ಸಮಾವೇಶದಲ್ಲಿ ಭಾಗವಹಿಸುವಿಕೆಯ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ 8217876335, 9449425536 ಈ ನಂಬರ್ ಗಳಿಗೆ ಸಂಪರ್ಕಿಸಬಹುದಾಗಿದೆ. ಬ್ರಾಹ್ಮಣ ಸಮಾಜದ ಏಳಿಗೆಗಾಗಿ ಕಳೆದ ಎಂಟು ವರ್ಷಗಳಿಂದ ಈ ಸಂಘಟನೆ ಶ್ರಮಿಸುತ್ತಿದೆ ಎಂದು ಮುಖಂಡರು ತಿಳಿಸಿದ್ರು. ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ವಿಶ್ವನಾಥ ಜೋಶಿ, ವಿಜಯ ಜೋಶಿ, ವಿಶ್ವನಾಥ ಕುಲಕರ್ಣಿ, ಕೆ ಬಿ ಕುಲಕರ್ಣಿ ಸೇರಿದಂತೆ ಇತರರು ಭಾಗವಹಿಸಿದ್ದರು.