ಜಿಲ್ಲೆ

ವಿಜಯಪುರದಲ್ಲಿ ಕರೋನಾ ಅಟ್ಟಹಾಸ.... ಜಿಲ್ಲಾಡಳಿತ ಕಚೇರಿಯಲ್ಲಿ ಮುಳ್ಳು ಬೇಲಿ !

ವಿಜಯಪುರ: ಬಿಸಿಲೂರಿನಲ್ಲಿ

ಮಹಾಮಾರಿ ಕರೊನಾ ಅಟ್ಟಹಾಸ ಹೆಚ್ಚಾಗಿದ್ದು ಶುಕ್ರವಾರ ಮತ್ತೆ 30 ಪ್ರಕರಣಗಳು ಕಾಣಿಸಿಕೊಂಡಿವೆ.

ಮಾರ್ಚ್ ಮೊದಲ ವಾರದಿಂದ ದಿನೇ ದಿನೇ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ತೀವ್ರ ಆತಂಕ ಸೃಷ್ಟಿಸಿದೆ.

ಈಗಾಗಲೇ ಲಸಿಕೆ ಅಭಿಯಾನ ಆರಂಭಗೊಂಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಜನ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ.

ಜಿಲ್ಲಾಡಳಿತ ಕರೊನಾ ನಿಯಂತ್ರಣಕ್ಕೆ ಸಾಕಷ್ಟು ಮುಂಜಾಗೃತೆ ಕ್ರಮ ಕೈಗೊಂಡಿದೆ. ಜಿಲ್ಲಾಡಳಿತ ಆವರಣದಲ್ಲಿ ಬಣ್ಣದ ಚಿತ್ತಾರ ಬಿಡಿಸಿ ಜಾಗೃತಿ ಮೂಡಿಸಲಾಗಿದೆ. ಮುಂದುವರಿದು ಪ್ರವೇಶ ದ್ವಾರದಲ್ಲೇ ತಪಾಸಣೆ ಹೆಚ್ಚಿಸಿದ್ದು ಅಲ್ಲಲ್ಲಿ ಮುಳ್ಳು ಬೇಲಿ ಅಳವಡಿಸಲಾಗಿದೆ. ಜನದಟ್ಟಣೆ ಹೆಚ್ಚದಂತೆ ಮುಳ್ಳು ಕಂಠಿ ಹಚ್ಚಿ ಕೆಲವೇ ಮಾರ್ಗಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಜಿಲ್ಲಾಡಳಿತ ಆವರಣದಲ್ಲೀಗ ಎಲ್ಲಿ ನೋಡಿದರಲ್ಲಿ ಮುಳ್ಳು ಬೇಲಿ ರಾರಾಜಿಸುತ್ತಿದೆ.