ಜಿಲ್ಲೆ

ವಿಜಯಪುರದ ಎಲ್ಲ‌ ಆಸ್ಪತ್ರೆಗಳಲ್ಲಿ ಬೆಡ್ ಭರ್ತಿ, ನಾನ್ ಕೋವಿಡ್ ರೋಗಿಗಳಿಗೂ ಎದುರಾಯಿತು ಸಂಕಟ

ವಿಜಯಪುರ: ಒಂದೆಡೆ ಬೆಡ್, ವೆಂಟಿಲೇಟರ್ ಸಿಗದೇ ಕೋವಿಡ್ ರೋಗಿಗಳು ಪರದಾಡುತ್ತಿದ್ದರೆ ಇನ್ನೊಂದೆಡೆ ನಾನ್ ಕೋವಿಡ್ ರೋಗಿಗಳು ಸಹ ಅದೇ ಸಮಸ್ಯೆ ಎದುರಿಸುತ್ತಿದ್ದಾರೆ.

ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಭರ್ತಿಯಾಗಿದ್ದು ರೋಗಿಗಳು ತೀವ್ರವಾಗಿ ಪರದಾಡುತ್ತಿದ್ದಾರೆ.

ಜಿಲ್ಲೆಯ ಸಿಂದಗಿ ತಾಲೂಕಿನ

ಆಸಂಗಿಹಾಳ ಗ್ರಾಮದಿಂದ ರೋಗಿಯೊಬ್ಬ ಗುರುವಾರ ಸಂಜೆಯಿಂದಲೇ ಬೆಡ್ ಗಾಗಿ ಅಲೆದಾಡುತ್ತಿದ್ದು ಶುಕ್ರವಾರ ಬೆಳಗಿನ ಜಾವದವರೆಗೆ ಬೆಡ್ ಸಿಕ್ಕಿಲ್ಲ. ಇಡೀ ರಾತ್ರಿ ಆಸ್ಪತ್ರೆಗಳಿಗೆ ಅಲೆದಾಡಿ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ರೋಗಿಯನ್ನು ಕರೆತಂದಿದ್ದಾರೆ. ಹೇಗಾದರೂ ಮಾಡಿ ಬೆಡ್ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ. ಆದರೆ ರೋಗಿ ಮತ್ತು ಆತನ ಸಂಬಂಧಿಗಳ ಆರ್ತನಾದ ಆಲಿಸುವವರಿಲ್ಲದಾಗಿದೆ.