ಜಿಲ್ಲೆ

ವಿಜಯಪುರ ಎಲ್ ಬಿಎಸ್ ಮಾರುಕಟ್ಟೆ ಯಲ್ಲಿ ಬೆಂಕಿ ಅನಾಹುತ

ವಿಜಯಪುರ: ಐತಿಹಾಸಿಕ ನಗರಿಯ ಹೃದಯ ಭಾಗದಲ್ಲಿರುವ ಲಾಲ್ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ ಸಂಕೀರ್ಣ ದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

ಸೋಮವಾರ ರಾತ್ರಿ ಏಕಾಏಕಿ ಹೊತ್ತಿಕೊಂಡ ಬೆಂಕಿ ಕೆನ್ನಾಲಿಗೆ ಹಲವು ಅಂಗಡಿಗಳಿಗೆ ವ್ಯಾಪಿಸಿತು.

ವಿದ್ಯುತ್ ಅವಘಡದಿಂದಾಗಿ ಕಿಶೋರ ನಾಯ್ಕ ಎಂಬುವರ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ

ಇಡೀ ಮಾರುಕಟ್ಟೆ ಪ್ರಾಂಗಣದಿಂದ ದಟ್ಟ ಹೊಗೆ ಕಾಣಿಸಿತು.ಇದರಿಂದ ಜನ ಭಯ ಭೀತರಾಗಿ ಓಡಿ ಬಂದರು.

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ ಬೆಂಕಿ ನಂದಿಸುವ ಹೊತ್ತಿಗೆ ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ಆವರಿಸಿತ್ತು. ಒಟ್ಟು ಮೂರು ಮಳಿಗೆಗಳಿಗೆ ಬೆಂಕಿ ವ್ಯಾಪಿಸಿ‌ ಲಕ್ಷಾಂತರ ರೂ.ಮೌಲ್ಯದ ಸಾಮಗ್ರಿ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ.

ಒಟ್ಟು ಎರಡು ಅಗ್ನಿ ಶಾಮಕ ವಾಹನ ಹಾಗೂ 15 ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಸಫಲರಾದರಿ. ಅಗ್ನಿ ಶಾಮಕ ಜಿಲ್ಲಾಧಿಕಾರಿ ರಂಗನಾಥ ಹಾಗೂ ಠಾಣಾಧಿಕಾರಿ ಪ್ರಕಾಶ ಪವಾರ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.