ಬೆಳಗಾವಿ ಶೇಖ್​ ಶಿಕ್ಷಣ ಸಂಸ್ಥೆಯ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ ಸ್ಟಡಿಸ್​ ವತಿಯಿಂದ ಬೈಲಹೊಂಗಲ ತಾಲೂಕಿನ ನೇಗಿನಹಾಳದಲ್ಲಿರುವ ವಿಜಯಕಾಂತ ಡೈರಿ ಮತ್ತು ಆಹಾರ ಉತ್ಪನ್ನಗಳ ಲಿ. ಕಂಪನಿಗೆ ಬುಧವಾರ ಶೈಕ್ಷಣಿಕ ಭೇಟಿ ನೀಡಿದರು. ಪ್ರೊ.ಶಶಿಕಾಂತ ಹುಣಶ್ಯಾಳ, ಪ್ರೊ.ಶಿರಿನ್​ ಅಥಾನಿ, ಅಕ್ಷಯ ಕಾಂಬಳೆ, ವಿಶಾಲ್​ ಪಾಟೀಲ, ಅರ್ಚನಾ ಘಾಸ್ಟಿ ಹಾಗೂ ಬಿಸಿಎ ಮತ್ತು ಬಿಕಾಂ ವಿದ್ಯಾರ್ಥಿಗಳು ಇದ್ದರು. 
ಜಿಲ್ಲೆ

ವಿಜಯಕಾಂತ ಡೇರಿಗೆ ವಿದ್ಯಾರ್ಥಿಗಳ ಭೇಟಿ

ಬೆಳಗಾವಿ: ನಗರದ ಶೇಖ್​ ಶಿಕ್ಷಣ ಸಂಸ್ಥೆಯ ಬೆಳಗಾವಿ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ ಸ್ಟಡಿಸ್​ ವತಿಯಿಂದ ಬೈಲಹೊಂಗಲ ತಾಲೂಕಿನ ನೇಗಿನಹಾಳದಲ್ಲಿರುವ ವಿಜಯಕಾಂತ ಡೇರಿ ಮತ್ತು ಆಹಾರ ಉತ್ಪನ್ನಗಳ ಲಿ. ಕಂಪನಿಗೆ ಬುಧವಾರ ಶೈಕ್ಷಣಿಕ ಭೇಟಿ ನೀಡಲಾಯಿತು.

ಕೈಗಾರಿಕಾ ಭೇಟಿಯು ವಿದ್ಯಾರ್ಥಿಗಳಿಗೆ ಡೇರಿ ಉದ್ಯಮದ ಪ್ರಾಯೋಗಿಕ ಅಂಶ ತಿಳಿದುಕೊಳ್ಳಲು ನೆರವಾಯಿತು. ಹಾಲು, ಬೆಣ್ಣೆ, ಚೀಸ್​ ಮತ್ತು ಮೊಸರಿನಂತಹ ವಿವಿಧ ಡೇರಿ ಉತ್ಪನ್ನಗಳ ಉತ್ಪಾದನೆಯನ್ನು ನೇರವಾಗಿ ನೋಡಿದರು. ಉತ್ತಮ ಉತ್ಪನ್ನಗಳು ಮಾತ್ರ ಮಾರುಕಟ್ಟೆ ತಲುಪುತ್ತವೆ ಎನ್ನುವುದನ್ನು ತಿಳಿದುಕೊಂಡರು. ಗುಣಮಟ್ಟ ನಿಯಂತ್ರಣ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ಾನ ಪಡೆದರು. ಕಾರ್ಖಾನೆಯ ಅತ್ಯಾಧುನಿಕ ಯಂತ್ರೋಪಕರಣ ಮತ್ತು ಮುಂದುವರಿದ ಉತ್ಪಾದನಾ ತಂತ್ರ ಮತ್ತು ಆಧುನಿಕ ಉತ್ಪಾದನೆಯಲ್ಲಿ ತಂತ್ರಾನ ಅಳವಡಿಕೆ ತಿಳಿದುಕೊಂಡರು.

ಡೇರಿ ವಲಯದಲ್ಲಿನ ಸವಾಲು ಮತ್ತು ನಾವೀನ್ಯತೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಈ ಭೇಟಿ ಸಹಾಯವಾಯಿತು. ಒಟ್ಟಾರೆಯಾಗಿ ವಿಜಯಕಾಂತ ಡೇರಿಗೆ ಭೇಟಿ ನೀಡಿರುವುದರಿಂದ ವಿದ್ಯಾರ್ಥಿಗಳ ಶೈಣಿಕ ಕಲಿಕೆ, ಯಶಸ್ವಿ ಆಹಾರ ಉತ್ಪಾದನಾ ಕಂಪನಿ ನಡೆಸುವ ಕಾರ್ಯಾಚರಣೆ ಮತ್ತು ಕಾರ್ಯತಂತ್ರದ ಅಂಶಗಳ ಬಗ್ಗೆ ತಿಳಿವಳಿಕೆ ಹೊಂದಿದರು. ಪ್ರೊ.ಶಶಿಕಾಂತ ಹುಣಶ್ಯಾಳ, ಪ್ರೊ.ಶಿರಿನ್​ ಅಥಾನಿ, ಅಕ್ಷಯ ಕಾಂಬಳೆ, ವಿಶಾಲ್​ ಪಾಟೀಲ, ಅರ್ಚನಾ ಘಾಸ್ಟಿ ಹಾಗೂ ಬಿಸಿಎ ಮತ್ತು ಬಿಕಾಂ ವಿದ್ಯಾರ್ಥಿಗಳು ಇದ್ದರು.