ಜಿಲ್ಲೆ

ವಿಜಯ ದಾಸರ ಆರಾಧನಾ ಮಹೋತ್ಸವ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಯಾಲಕ್ಕಿ ಶೆಟ್ಟರ್​ ಕಾಲನಿಯ ಪುರಂದರ ಮಂಟಪದಲ್ಲಿ ವಿಜಯ ದಾಸರ ಆರಾಧನಾ ಮಹೋತ್ಸವವನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಶ್ರೀ ಮಠದಲ್ಲಿ ಅಂದು ಪ್ರಾತಃಕಾಲದಲ್ಲಿ ಯಾಯಿವಾರದಿಂದ ಆರಂಭವಾದ ಮಹೋತ್ಸವವು, ಶ್ರೀ ಚಕ್ರಪಾಣಿ ಸಾಲಿಗ್ರಾಮಕ್ಕೆ ಪಂಚಾಮೃತ ಅಭಿಷೇಕ, ವಿಜಯ ದಾಸರ ಕವಚ ಪಾರಾಯಣ, ಪಂ. ಜಿ.ವಿ. ನವಲಗುಂದ ಹಾಗೂ ಪಂ. ಬಂಡಾಚಾರ್​ ಗಿಡದಹುಬ್ಬಳ್ಳಿ ಅವರಿಂದ ದಾಸರ ಪುಣ್ಯಸ್ಮರಣೆಯಿಂದ ಆಗುವ ಇಷ್ಟ ಪ್ರಾಪ್ತಿ ಅನಿಷ್ಟ ನಿವೃತ್ತಿ ಬಗ್ಗೆ ಪ್ರವಚನ, ಸೌಭಾಗ್ಯ ಭಜನಾ ಮಂಡಳಿಯಿಂದ ದುರ್ಗಾ ಸುಳಾದಿ ಪಠಣ, ಇತರ ಕಾರ್ಯಕ್ರಮಗಳು ನೆರವೇರಿದವು.

ಧರ್ಮದರ್ಶಿ ಸಿ. ನಾಗರಾಜ, ವಿಜಯ ವಿಠ್ಠಲ್​ ಆಚಾರ, ಎ. ಜಿ. ಮಂಗಳೂರು, ಮಹೇಶ ಮಳಿಯೇ, ಅರವಿಂದ ನಾಗಜ್ಜನವರ, ಬಾಬುರಾವ್​ ಪಾಟೀಲ, ಎನ್​.ಆರ್​. ಕುಲಕರ್ಣಿ, ಆರ್​. ಎಚ್​. ಕುಲಕರ್ಣಿ, ಆರ್​. ಜಿ. ಕುಲಕರ್ಣಿ, ಶ್ರೀಧರ ಗೋಡಖಿಂಡಿ, ವೇದವತಿ ನಾಗರಾಜ, ರಜನಿ ಕುಲಕರ್ಣಿ, ಶೈಲಾ ಆಚಾರ, ಸೌಭಾಗ್ಯ ಮಂಡಳದ, ಸದಸ್ಯರು, ಇತರರು ಇದ್ದರು.