ಕಲಬುರಗಿ: ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ನಡೆದ ರಾಜಿ ಸಂಧಾನದಲ್ಲಿ ವಿವಾಹ ವಿಚ್ಛೇದನ ಪಡೆಯಲು ಬಂದಿದ್ದ ೧೨ ದಂಪತಿಯನ್ನು ಒಂದುಗೂಡಿಸಿ, ವೈವಾಹಿಕ ಜೀವನಕ್ಕೆ ಕಾಲಿಡುವಂತೆ ಸಂಧಾನ ಮಾಡಿಸಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿ¯್ಲÁ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಅಧ್ಯP್ಷÀ ಎ.ವಿ.ಶ್ರೀನಾಥ ಮತ್ತು ಹಿರಿಯ ಸಿವಿಲï ನ್ಯಾಯಾಧೀಶ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ್ ನವಲೆ ಮಧ್ಯಸ್ಥಿಕೆಯಲ್ಲಿ ಒಂದುಗೂಡಿಸಲಾಯಿತು.
ಕುಟುAಬ ನ್ಯಾಯಾಲಯ ಹಾಗೂ ತಾಲೂಕಿನ ನ್ಯಾಯಾಲಯಗಳಲ್ಲಿ ೧೨ ಪ್ರಕರಣಗಳಲ್ಲಿ ಬೇರೆ ಬೇರೆಯಾಗಿ, ವಿಚ್ಛೇದನಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದ ಪತಿ, ಪತ್ನಿಯರನ್ನು ಹಳೆ ಸಮಸ್ಯೆ ಮರೆದು, ಮುಂದಡಿ ಇಡುವಂತೆ ಮನವರಿಕೆ ಮಾಡಿ, ಒಂದುಗೂಡಿಸಲಾಯಿತು. ೧೦ ವರ್ಷಕ್ಕಿಂತ ಹೆಚ್ಚಿನ ಕಾಲದಿಂದ ವಿಚ್ಛೇದನ ಅರ್ಜಿ ಹಾಕಿ ದೂರಾಗಿದ್ದು, ಎರಡು ದಂಪತಿ ಜೋಡಿಯನ್ನು ಇತ್ಯರ್ಥ ಪಡಿಸಿ, ಒಂದುಗೂಡಿಸಲಾಯಿತು.
ಜಿ¯್ಲÉಯ ವಿವಿಧ ನ್ಯಾಯಾಲಯಗಳಲ್ಲಿದ್ದ ೧,೨೪,೫೮೧ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ನ್ಯಾಯಾಧೀಶರು, ಕಕ್ಷಿದಾರರು, ಸಂಧಾನಕಾರರು ಹಾಗೂ ಸಂಬAಧಪಟ್ಟ ವಕೀಲರು ರಾಜಿ ಸಂಧಾನದಲ್ಲಿ ಪಾಲ್ಗೊಂಡರು. ತಾಲೂಕು ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಲೋಕ ಅದಾಲತ್ ನಡೆಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿದರು.
ಅದಾಲತ್‌ನಲ್ಲಿ ಸಿವಿಲï ದಾವೆಗಳು, ಮೋಟಾರು ವಾಹನ, ಅಪಘಾತ ಪರಿಹಾರ ಪ್ರಕರಣಗಳು, ರಾಜಿಯಾಗಬಹುದಾದ ಕ್ರಿಮಿನಲï ಪ್ರಕರಣ, ಭೂಸ್ವಾಧೀನ ಪರಿಹಾರ ವಸೂಲಾತಿ ಪ್ರಕರಣಗಳು, ಬ್ಯಾಂಕ್‌ಗಳ ಕುರಿತ ವ್ಯಾಜ್ಯಪೂರ್ವ ಪ್ರಕರಣ ಸೇರಿ ೧.೨೪ ಲP್ಷÀ ಪ್ರಕರಣ ಇತ್ಯರ್ಥಪಡಿಸಿ, ೫೯.೦೨ ಕೋಟಿ ಮೊತ್ತ ಸಂತ್ರಸ್ತರಿಗೆ ಪಾವತಿಸುವಂತೆ ಲೋಕ ಅದಾಲತ್ ಆದೇಶಿಸಿತು.