ಬಾಗಲಕೋಟೆ: ವಿವಾಹ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ ೯ ದಂಪತಿಗಳು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದಾಗುವ ಮೂಲಕ ಹೊಸ ಜೀವನಕ್ಕೆ ನಾಂದಿ ಹಾಡಿದರು.
ಡಿ.೯ ರಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯ ನೇರಳೆ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕುಟುಂಬ ನ್ಯಾಯಾಲಯಗಳಲ್ಲಿ ವಿಚ್ಛೇದನ ಕೋರಿ ೯ ಜೋಡಿಗಳು ಅರ್ಜಿ ಸಲ್ಲಿಸಿದ್ದರು. ಸಂದಾನದಲ್ಲಿ ತಮ್ಮ ತಪ್ಪನ್ನು ಅರಿತು ಒಟ್ಟಿಗೆ ಬಾಳುವ ಸಂಕಲ್ಪ ಮಾಡಿ, ಹೊಂದಾಣಿಕೆಯಿಂದ ಜೀವನ ನಡೆಸುವುದಾಗಿ ತಿಳಿಸಿದರು. ಬಾಗಲಕೋಟೆ ನ್ಯಾಯಾಲಯದಲ್ಲಿ ೧, ಜಮಖಂಡಿ ೧, ಬಾದಾಮಿ ೩, ಮುಧೋಳ ೨ ಹಾಗೂ ಬನಹಟ್ಟಿ ಕೋರ್ಟನಲ್ಲಿ ೨ ಸೇರಿ ಒಟ್ಟು ೯ ಜೋಡಿಗಳು ವಿಚ್ಚೇದನ ಹಿಂಪಡೆದು ಒಂದಾಗಿದ್ದಾರೆ.
ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಬಾಕಿ ಇರುವ ೮೦೩೩ ಮತ್ತು ೧೧೫೩೪ ವಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು ೧೯೫೬೭ ಪ್ರಕರಣಗಳನ್ನು ವಿಚಾರಣೆಗಾಗಿ ತೆಗೆದುಕೊಳ್ಳಲಾಗಿತ್ತು. ಈ ಪೈಕಿ ೧೫೯೬೨ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ರಾಜೀ ಸಂಧಾನ ಮಾಡಲಾಯಿತು. ಈ ಎಲ್ಲ ಪ್ರಕರಣಗಳಿಗೆ ಒಟ್ಟು ೨೩.೪೯ ಕೋಟಿ ರೂ.ಗಳಿಗೆ ರಾಜೀ ಮಾಡಿಸಲಾಯಿತು.
ಬಾಗಲಕೋಟೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಒಟ್ಟು ೨೬೪೬ ಪೈಕಿ ೧೯೯೯ ಪ್ರಕರಣಗಳು ಇತ್ಯರ್ಥವಾದರೆ, ಬೀಳಗಿ ಕೋರ್ಟನಲ್ಲಿ ೪೧೪ ಪ್ರಕರಣಗಳ ಪೈಕಿ ೨೮೯, ಮುಧೋಳ ಕೋರ್ಟನಲ್ಲಿ ೮೧೦ ಪ್ರಕರಣಗಳ ಪೈಕಿ ೬೯೫, ಬನಹಟ್ಟಿ ಕೋರ್ಟನಲ್ಲಿ ೮೨೮ ಪ್ರಕರಣಗಳ ಪೈಕಿ ೬೮೬, ಹುನಗುಂದ ಕೋರ್ಟನಲ್ಲಿ ೫೫೧ ಪೈಕಿ ೩೭೨, ಇಳಕಲ್ಲ ಕೋರ್ಟನಲ್ಲಿ ೩೯೮ ಪೈಕಿ ೩೪೨, ಜಮಖಂಡಿ ಕೋರ್ಟನಲ್ಲಿ ೧೭೦೭ ಪ್ರಕರಣಗಳ ಪೈಕಿ ೧೩೫೬ ಹಾಗೂ ಬಾದಾಮಿ ಕೋರ್ಟನಲ್ಲಿ ೬೭೯ ಪ್ರಕರಣಗಳ ಪೈಕಿ ೪೮೩ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.
ವಾಜ್ಯ ಪೂರ್ವ ಪ್ರಕರಣಗಳಲ್ಲಿ ನೀರಿನ ಬಿಲ್ ಮತ್ತು ಇತರೆ ಬಿಲ್ ಪಾವತಿಗೆ ಸಂಬಂಧಿಸಿದಂತೆ ೧೬೭೯ ಪ್ರಕರಣಗಳು ದಾಖಲಾಗಿದ್ದವರು. ಈ ಪೈಕಿ ೧೩೧೨ ಪ್ರಕರಣಗಳನ್ನು ಇತ್ಯರ್ಥಪಡಿಸಿ ೫೯೨೮೭೯ ರೂ.ಗಳ ಬಿಲ್ ನ್ಯಾಯಾಲಯದಲ್ಲಿ ಪಾವತಿಸಿದ್ದಾರೆ. ಟ್ರಾಪಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ೫೩೮೨ ಸಣ್ಣ ಪ್ರಕರಣಗಳಲ್ಲಿ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಸಾರ್ವಜನಿಕರು ೨೫೨೭೬೦೦ ರೂ.ಗಳ ದಂಡ ಪಾವತಿಸಿದ್ದಾರೆ. ಗ್ರಾಹಕರ ವ್ಯಾಜ್ಯಗಳಿಗೆ ಸಂಬಂಽಸಿದ ೩೮ ಪ್ರಕರಣಗಳಲ್ಲಿ ೨೪ ಇತ್ಯರ್ಥಗೊಂಡಿದ್ದು, ೨೮೫೮೫೪೮ ರೂ.ಗಳ ದಂಡ ಪಾವತಿ ಮಾಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶ ಜಿ.ಎ.ಮೂಲಿಮನಿ, ಕುಟುಂಬ ನ್ಯಾಯಾಲಯ ಪ್ರಧಾನ ನ್ಯಾಯಾದೀಶ ಕೃಷ್ಣಮೂರ್ತಿ ಪಡಸಲಗಿ, ಪ್ರಧಾನ ಹಿರಿಯ ದಿವಾನಿ ನ್ಯಾಯಾದೀಶೆ ಪಲ್ಲವಿ ಆರ್, ೧ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾದೀಶೆ ಹೇಮಾ ಪಸ್ತಾಪುರ, ೨ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾದೀಶ ಮಹೇಶ ಪಾಟೀಲ, ಪ್ರಧಾನ ದಿವಾನಿ ನ್ಯಾಯಾದೀಶ ಮುರುಗೇಂದ್ರ ತುಬಾಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ, ಸೇರಿದಂತೆ ಕಕ್ಷಿದಾರರು, ವಕೀಲರು ಇದ್ದರು.