ಜಿಲ್ಲೆ

ವಿಕಾಸ ಪರ್ವ ಚಿತ್ರ ಸೆ. 14ರಂದು ರಾಜ್ಯಾದ್ಯಂತ ಬಿಡುಗಡೆ

ಹಾಸನ: ಸಮಾಜದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ನಡೆಯಬಹುದಾದ ಅಥವಾ ನಡೆದಿರುವ ಘಟನೆಯನ್ನು ಆದರಿಸಿ ವಿಕಾಸ ಪರ್ವ ಚಲನಚಿತ್ರವನ್ನು ತಯಾರಿಸಿದ್ದು ಸೆ. 14ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಾಯಕನಟ ರೋಹಿತ್ ನಾಗೇಶ್ ತಿಳಿಸಿದರು
ಹೊಸಬರ ತಂಡ ಒಂದು ವಿಶೇಷ ಕಥೆಯನ್ನ ಆಧರಿಸಿ ಚಲನಚಿತ್ರವನ್ನು ತಯಾರಿಸಿದ್ದು, ಚಿಕ್ಕಮಂಗಳೂರು, ಸಕಲೇಶಪುರ, ಬೆಂಗಳೂರು ಸೇರಿದಂತೆ ಹಲವೆಡೆ 35 ದಿನಗಳ ಕಾಲ ಚಿತ್ರೀಕರಣಗೊಂಡಿದ್ದು, ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಇದಕ್ಕೆ ಜಿಲ್ಲೆ ಮತ್ತು ರಾಜ್ಯದ ಜನರ ಚಿತ್ರ ನೋಡಿ ಸಹಕಾರ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾನು ಕಿರುತೆರೆಯಲ್ಲಿ ಹಲವಾರು ಧಾರಾವಾಹಿ ಮತ್ತು ಚಲನಚಿತ್ರದಲ್ಲಿ ನಟಿಸಿದ್ದು, ಮೊದಲ ಬಾರಿಗೆ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ನಟಿ ಸ್ವಾತಿ ಅವರು ಚಿತ್ರದ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ವಿಕಾಸಪರ್ವ ಒಂದು ಸಾಮಾಜಿಕ ಕಳಕಳಿಯುಳ್ಳ ಚಿತ್ರ ಇದಾಗಿದ್ದು, ವಿಶೃತ್ ನಾಯಕ್ ಅವರು ವಿಕಾಸ ಪರ್ವ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವ ಜೊತೆಗೆ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಅನ್ಬು ಅರಸ್ ಅವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಎಂದರು.
ಈ ಚಿತ್ರದಲ್ಲಿ 3 ಹಾಡುಗಳಿದ್ದು, ಎಲ್ಲಾ ಹಾಡುಗಳು ಕಥೆಯ ಜೊತೆ ಜೊತೆಗೇ ಸಾಗುತ್ತವೆ. ಎಲ್ಲ ಹಾಡುಗಳಿಗೂ ಡಾ.ವಿ. ನಾಗೇಂದ್ರಪ್ರಸಾದ್ ಅವರೇ ಸಾಹಿತ್ಯ ರಚಿಸಿದ್ದು, ಎಪಿಓ ಸಂಗೀತ ಸಂಯೋಜಿಸಿದ್ದಾರೆ. ಲಹರಿ ಆಡಿಯೋ ಮೂಲಕ ಹಾಡುಗಳು ಬಿಡುಗಡೆಯಾಗಿವೆ. ನವೀನ್ ಸುವರ್ಣ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಶ್ರೀನಿವಾಸ ಕಲಾಲ್ ಅವರ ಸಂಕಲನ, ಟೈಗರ್ ಶಿವು ಅವರ ಸಾಹಸ ಸಂಯೋಜನೆ ಮಾಡಿದ್ದಾರೆ ಎಂದರು. ಈ ಚಿತ್ರದ ಉಳಿದ ತಾರಾಗಣದಲ್ಲಿ ಅಶ್ವಿನ್ ಹಾಸನ್, ನಿಶಿತಾಗೌಡ, ಬಲ ರಾಜವಾಡಿ, ಕುರಿರಂಗ ಮುಂತಾದವರಿದ್ದಾರೆ ಎಂದು ಚಿತ್ರದ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನಟಿ ಸ್ವಾತಿ, ನಿರ್ದೇಶಕ ಅನ್ಬು ಅರಸ್, ವಿಶೃತ್ ನಾಯಕ್, ನವೀನ್ ಸುವರ್ಣ, ಅಮ್ಸಬರ್ನ್, ಕುರಿರಂಗ ಇತರರು ಇದ್ದರು.