ಚಿತ್ರದುರ್ಗ: ಸಾಮಾಜಿಕ ಮೌಲ್ಯೋತ್ಪಾದಕ ಕ್ಷೇತ್ರಗಳನ್ನು ಕಡೆಗಣಿಸಿ, ಯುವಸಮೂಹಕ್ಕೆ ಶಕ್ತಿ ತುಂಬುವಲ್ಲಿ ವಿಫಲಗೊಂಡ ಮುಂಗಡ ಇದಾಗಿದೆ ಎಂದು ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಸಂಜೀವಕುಮಾರ ಮು. ಪೋತೆ ತಿಳಿಸಿದ್ದಾರೆ.
ಪಿಎಂ ವಿಶ್ವಕರ್ಮ ಯೋಜನೆಯಿಂದ ಕುಶಲಕರ್ಮಿಗಳಿಗೆ ನೆರವು, 78 ಲಕ್ಷ ರಸ್ತೆ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ, ಸ್ಕಿಲ್ ಇಂಡಿಯಾ ಮಿಷನ್‌ನಲ್ಲಿ 1.48 ಕೋಟಿ ಯುವಕರಿಗೆ ಕೌಶಲ ಶಿಕ್ಷಣ ತರಬೇತಿ ಕಾರ್ಯಕ್ರಮ ಜನರ ಮೂಗಿಗೆ ತುಪ್ಪ ಸವರಿದಂತಿವೆ. ಹೊಸ 3ಸಾವಿರ ಐಟಿಐ, 7 ಐಐಟಿ, 17 ಏಮ್ಸ್, 390 ವಿವಿಗಳ ಸ್ಥಾಪನೆ ಪ್ರಸ್ತಾಪಿಸಲಾಗಿದೆ. ಅದರೆ, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಯಾವುದೇ ಕ್ರಮ ಕಂಡು ಬಂದಿಲ್ಲ. ಇನ್ನಿತರೆ ಘೋಷಣೆಗಳು ಭಾರತದ ಆರ್ಥಿಕತೆಗೆ ಬೂಸ್ಟ್ ನೀಡಲು ವಿಫಲಗೊಳ್ಳುವ ಸಾಧ್ಯತೆಯೇ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.