ಕಲಬುರಗಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕರ‍್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ‍್ಖಗೆ ೨೦೨೪&೨೫ನೇ ಸಾಲಿನ ವಿವಿಧ ಯೋಜನೆಗಳಡಿ ವಿಕಲಚೇತನ ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಿಸಿದರು.
ನಗರದ ಅಪ್ಪ ಪಬ್ಲಿಕ್ ಶಾಲೆಯ ಪೂಜ್ಯ ಬಸವರಾಜಪ್ಪ ಅಪ್ಪ ಮೆಮೋರಿಯಲ್ ಹಾಲ್ನಲ್ಲಿ ನಡೆದ ಕರ‍್ಯಕ್ರಮದಲ್ಲಿ ಒಟ್ಟು ೮೮ ಫಲಾನುಭವಿಗಳಿಗೆ ೬೩.೪ ಲಕ್ಷ ರೂ. ಮೊತ್ತದ ಸಾಧನ ಸಲಕರಣೆ ವಿತರಿಸಲಾಯಿತು. ೨೬.೨೫ ಲಕ್ಷ ರೂ. ಅಂದಾಜು ಮೊತ್ತದ ೨೫ ಫಲಾನುಭವಿಗಳಿಗೆ ದೈಹಿಕ ವಿಕಲಚೇತನ ಯಂತ್ರಚಾಲಿತ ದ್ವಿಚಕ್ರ ವಾಹನ, ೧೨ ಲಕ್ಷ ರೂ. ಅಂದಾಜು ಮೊತ್ತದ ೧೨ ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವ್ಹೀಲಚೇರ್. ೧೯.೨ ಲಕ್ಷ ರೂ. ಅಂದಾಜು ಮೊತ್ತದಲ್ಲಿ ೨೦ ಅಂಧ ಫಲಾನುಭವಿಗಳಿಗೆ ವಿದ್ಯರ‍್ಥಿಗಳಿಗೆ ಟಾಕಿಂಗ್ ಲ್ಯಾಪಟಾಪ್, ೪.೭೫ ಲಕ್ಷ ರೂ. ಮೊತ್ತದಲ್ಲಿ ೧೯ ಅಂಧ ಫಲಾನುಭವಿಗಳಿಗೆ ಬ್ರೆಲ್ ಕಿಟ್ ೧.೨೦ ಲಕ್ಷ ವೆಚ್ಚ್ದಲ್ಲಿ ಶ್ರವಣದೋಶವುಳ್ಳ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಲ್ಯಾಪ್ಟಾಪ್ ಪಡೆದ ಫಲಾನುಭವಿಗಳು ಮಲಕಣ್ಣ, ಭಾಗೇಶ, ಶ್ರೀಕಾಂತ, ರಾಕೇಶ ಭಜಂತ್ರಿ, ಹೊಲಿಗೆ ಯಂತ್ರ ಪಡೆದ ಫಲಾನುಭವಿಗಳು, ಗೋಪಾಲ, ಭೀಮಶಾ, ಮಹೇಶ, ಭೀಮಶಪ್ಪ, ಗೋಪಾಲ, ಪದ್ಮವತಿ ಐನೊಳ್ಳಿ ಸೇರಿ ಒಟ್ಟು ೮೮ ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಿಸಲಾಯಿತು.
ಶಾಸಕರಾದ ಕನೀಜ್ ಫಾತೀಮಾ, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಓ ಭಂವರ್ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನರ‍್ದೇಶಕ ಡಾ.ಸಿದ್ರಾಮಣ್ಣ, ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾಧಿಕ್ ಹುಸೇನ್, ಖಾಸಿಂಸಾಬ್ ಇತರರಿದ್ದರು.