ಜಿಲ್ಲೆ

ವಿಎಗಳ ಬೇಡಿಕೆ ಈಡೇರಿಸಲು ಆಗ್ರಹ

ಕಲಬುರಗಿ: ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸದಿದ್ದರೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿAದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರದಿಂದ ಅನಿರ್ಧಿಷ್ಠಿತ ಧರಣಿ ನಡೆಸಲಾಯಿತು.
ಮೊಬೈಲï ಆ್ಯಪ್ ಮತ್ತು ವೆಬï ಅಪ್ಲಿಕೇಷನ್‌ಗಳ ಮೂಲಕ ಆಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಬೇಕು. ಕಂದಾಯ ಇಲಾಖೆಯ ಮೂರು ವರ್ಷಗಳ ಸೇವೆ ಪರಿಗಣಿಸಿ ಅಂತರ ಜಿ¯್ಲÁ ವರ್ಗಾವಣೆಗಾಗಿ ಕಂದಾಯ ಇಲಾಖೆಯಲ್ಲಿ ಹೊಸ ಮಾರ್ಗಸೂಚಿಯನ್ನು ರಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಆಯುಕ್ತಾಲಯದಯಡಿ ಗ್ರಾಮ ಆಡಳಿತ ಅಧಿಕಾರಿಗಳ ಜೇಷ್ಟತೆಯನ್ನು ರಾಜ್ಯ ಮಟ್ಟದ ಜೇಷ್ಟತೆಯನ್ನಾಗಿ ಪರಿಗಣಿಸುವ ಬಗ್ಗೆ, ಮೊಬೈಲï ತಂತ್ರಾAಶಗಳ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲ ಅಮಾನತ್‌ಗಳನ್ನು ತP್ಷÀಣವೇ ರದ್ದುಪಡಿಸಿ ಹಿಂಪಡೆಯಬೇಕು. ಪ್ರಯಾಣ ಭತ್ಯೆ ದರವನ್ನು ೫೦೦ ರಿಂದ ೩೦೦೦ ರೂ.ಗಳಿಗೆ ಹೆಚ್ಚುವರಿ ಮಾಡಬೇಕು, ಸುಸ್ಸಜ್ಜಿತ ಕಚೇರಿ ನೀಡಬೇಕು, ಮೊಬೈಲ್ ಫೋನ್, ಲ್ಯಾಪ್‌ಟಾಪ್, ಪ್ರಿಂಟರ್, ಸ್ಕಾÈನರ್ ನೀಡಬೇಕು ಎಂದು ಆಗ್ರಹಿಸಿದರು.
ರಜಾ ದಿನಗಳಲ್ಲಿ ಮೆಮೋ ಹಾಕಬಾರದು, ಖಾಲಿ ಇರುವ ಹುದ್ದೆಗೆ ಬಡ್ತಿ ನೀಡಬೇಕು, ವರ್ಚುವಲ್ ಸಭೆಗಳನ್ನು ನಿಷೇಧಿಸಬೇಕು, ಆಹಾರ ಇಲಾಖೆ ಕೆಲಸ ಕಂದಾಯ ಇಲಾಖೆಯ ಆಹಾರ ನಿರೀಕ್ಷಕರ ಹುದ್ದೆಗೆ ಪದೋನ್ನತಿ ನೀಡಬೇಕು, ಅಂತರ್ ಜಿಲ್ಲಾ ವರ್ಗಾವಣೆ ಮಾಡಬೇಕು, ಪ್ರಯಾಣ ಭತ್ಯೆ ಹೆಚ್ಚಿಸಬೇಕು, ಪ್ರೊಟೋಕಾಲ್ ಕೆಲಸದಿಂದ ಕೈಬಿಡಬೇಕು, ಜಮಾ ಬಂದಿ ರದ್ದುಪಡಿಸಬೇಕು, ರ‍್ಯಾಂಕಿAಗ್ ವ್ಯವಸ್ಥೆ ರದ್ದುಪಡಿಸಬೇಕು, ಮ್ಯುಟೇಷನ್ ಅವಧಿ ದಿನ ವಿಸ್ತರಿಸಬೇಕು, ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಬರೆದರು.
ಸಂಘದ ಜಿಲ್ಲಾಧ್ಯಕ್ಷ ಸೈಯದ್ ಜುಬೇರ ಅಲಿ, ಕುಮಾರ, ರೇವಣಸಿದ್ದಪ್ಪ ಚಂದನಕೇರಿ, ಗುರುಮೂರ್ತಿ, ರಾಜು ಗೋಪಕೆ, ಕೆ.ಕಿರಣಕುಮಾರ ಇತರರಿದ್ದರು.