ಜಿಲ್ಲೆ

ವಿಆರ್​ಎಲ್ ಪ್ರಾಂಗಣದಲ್ಲಿ ರಕ್ತದಾನ ಶಿಬಿರ

ಹುಬ್ಬಳ್ಳಿ: ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜನ್ಮದಿನದ ಅಂಗವಾಗಿ ವರೂರಿನ ವಿಆರ್​ಎಲ್ ಪ್ರಾಂಗಣದಲ್ಲಿ ಬುಧವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಹುಬ್ಬಳ್ಳಿ ರೋಟರಿ ಕ್ಲಬ್, ಪದ್ಮಶ್ರೀ ಆರ್.ಬಿ. ಪಾಟೀಲ ಕ್ಯಾನ್ಸರ್ ಸಂಸ್ಥೆ ಮತ್ತು ರೆಡ್​ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಶಿಬಿರಕ್ಕೆ ಡಾ. ವಿಜಯ ಸಂಕೇಶ್ವರ ಚಾಲನೆ ನೀಡಿದರು.

ಡಾ. ವಿಜಯ ಸಂಕೇಶ್ವರ ಅವರ ಮೊಮ್ಮಗ ಶಿವ ಸಂಕೇಶ್ವರ ಮೊದಲು ರಕ್ತದಾನ ಮಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಸುರೇಂದ್ರ ಪೋರವಾಲ್, ಮೊಹಿತ್ ದಾಂಡ್, ಬಿ.ಬಿ. ಪಾಟೀಲ, ಅಶೋಕ ತೋಳನ್ನವರ, ಕ್ಯಾನ್ಸರ್ ಆಸ್ಪತ್ರೆಯ ಡಾ. ಉಮೇಶ ಹಳ್ಳಿಕೇರಿ ಇತರರಿದ್ದರು.