ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಾಗಲಕೋಟೆ ಮತಕ್ಷೇತ್ರದ ಬಿಜೆಪಿ ಪದಾಽಕಾರಿಗಳಾದ ಬಸವರಾಜ ಹುನಗುಂದ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಕೊಣ್ಣೂರ, ರಾಜು ನಾಯ್ಕರ, ರಾಜು ರೇವಣಕರ, ಬಸವರಾಜ ಅವರಾದಿ, ರಾಜು ಮುದೆನೂರ, ಸತ್ಯನಾರಾಯಣ ಹೇಮಾದ್ರಿ ಮಾತನಾಡಿದರು.  
ಜಿಲ್ಲೆ

ವಿ.ಪ ಸದಸ್ಯ ಪಿ.ಎಚ್.ಪೂಜಾರ ಉಚ್ಛಾಟಿಸಿ

ಬಾಗಲಕೋಟೆ: ಸ್ವಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧವೇ ಬೇಕಾಬಿಟ್ಟಿಯಾಗಿ ಮಾತನಾಡುತ್ತಿರುವ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಬಾಗಲಕೋಟೆ ಮತಕ್ಷೇತ್ರದ ಬಿಜೆಪಿ ಪದಾಽಕಾರಿಗಳು ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಹುನಗುಂದ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಕೊಣ್ಣೂರ, ರಾಜು ರೇವಣಕರ, ರಾಜು ನಾಯ್ಕರ ವಿ.ಪ ಸದಸ್ಯ ಪಿ.ಎಚ್.ಪೂಜಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾರ್ಯಕರ್ತರ ಶಕ್ತಿ ಆಗಿರುವ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ ಎಂದು ಹರಿಹಾಯ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್ ಮಾತನಾಡಿ, ಸಂಘ-ಸAಸ್ಥೆ ಹಾಗೂ ಬ್ಯಾಂಕ್ ಮೂಲಕ ಸಾವಿರಾರೂ ಜನರಿಗೆ ಉದ್ಯೋಗ ನೀಡಿರುವುದು ಮಾಜಿ ಶಾಸಕ ವೀರಣ್ಣ ಚರಂತಿಮಠ. ನೀವು ಎಷ್ಟು ಜನರಿಗೆ ಉದ್ಯೋಗ ನೀಡಿದ್ದೀರಿ? ಚರಂತಿಮಠ ಅವರು ಪಕ್ಷದ ಕಾರ್ಯಕರ್ತರಿಗೆ ಸ್ವಂತ ಉದ್ಯೋಗಗಳನ್ನು ಮಾಡಲು ಪ್ರೋತ್ಸಾಹಿಸುತ್ತಾರೆ. ಯಾರ ಮೇಲೂ ದಬ್ಬಾಳಿಕೆ ಮಾಡಿಲ್ಲ. ರಾಜಕೀಯದಲ್ಲಿ ಆರಕ್ಕೇರದ ಮೂರಕ್ಕಿಳಿಯದ ನಿಮ್ಮಿಂದ ಕಾರ್ಯಕರ್ತರಿಗೆ ಯಾವುದೇ ಅನುಕೂಲವಾಗಿಲ್ಲ. ನಿಮಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ವಿರುದ್ಧ ಮಾತನಾಡುವ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೀರಣ್ಣ ಚರಂತಿಮಠ ಅವರು ಮೂರು ಬಾರಿ ಶಾಸಕರಾಗಿ ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರಕ್ಕೆ ಸಾವಿರಾರೂ ಕೋಟಿ ರೂ. ಅನುದಾನ ತಂದು, ರಸ್ತೆ, ಚರಂಡಿ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ತಾವು ಇಲ್ಲಿಯವರೆಗೆ ಏನು ಕೆಲಸ ಮಾಡಿದ್ದೀರಿ ಎಂದು ಹೇಳಲಿ. ಎನ್.ಎ ಮಾಡಿಸುವವರಿಂದ ನಿಮಗೆ ಹಫ್ತಾ ಬರದಿದ್ದಾಗ ಅವರ -ೆÊಲ್‌ಗಳಿಗೆ ಸಹಿಗೆ ತಡೆ ಒಡ್ಡುತ್ತೀರಿ?À ನಿಮ್ಮಿಂದ ನಗರಕ್ಕೆ ಯಾವುದೇ ಉಪಯೋಗವಾಗಿಲ್ಲ. ಬಿಜೆಪಿ ಪಕ್ಷದ ಕಾರ್ಯಕರ್ತರ ಭಿಕ್ಷೆಯಿಂದ ವಿಪ ಸದಸ್ಯರಾಗಿದ್ದನ್ನು ಮರೆತು ಮಾತನಾಡಬೇಡಿ ಎಂದು ಟೀಕಾ ಪ್ರಹಾರ ನಡೆಸಿದರು.

ಮುಖಂಡ ರಾಜು ರೇವಣಕರ ಮಾತನಾಡಿ, ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಪಕ್ಷದ ಕಾರ್ಯಕರ್ತರಿಗೆ ಸ್ವಾಭಿಮಾನದಿಂದ ಬದುಕು ಕಟ್ಟಿಕೊಟ್ಟಿದ್ದಾರೆ. ವಿನಃ ಕೈಚಾಚುವುದನ್ನು ಹೇಳಿಲ್ಲ. ಪಕ್ಷದ ಕಾರ್ಯಕರ್ತರನ್ನು ಸದೃಢವಾಗಿ ಮಾಡಿದ್ದಾರೆ. ಅವರು ಎಂದಿಗೂ ಕಾನೂನು ಚೌಕಟ್ಟು ಮೀರಿ ನಮಗೆ ಕೆಲಸ ಕೊಟ್ಟಿಲ್ಲ. ಎಲ್ಲವೂ ಸರಿಯಾಗಿದ್ದಾಗ ಮಾತ್ರ ಸಂಘದಲ್ಲಿ ಬಿಲ್ ಆಗುತ್ತವೆ. ಇಂತಹ ನಾಯಕನ ವಿರುದ್ಧ ಮಾತನಾಡಿರುವುದರಿಂದ ಕಾರ್ಯಕರ್ತರ ನೋವು ಉಂಟು ಮಾಡಿದೆ ಎಂದು ಹೇಳಿದರು.

ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ, ನಗರಸಭೆ ಮಾಜಿ ಉಪಾಧ್ಯಕ್ಷ ಬಸವರಾಜ ಅವರಾದಿ ಮಾತನಾಡಿ, ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರ ನಗರಸಭೆ ಹಾಗೂ ಪ್ರತಿ ಗ್ರಾಪಂನಲ್ಲಿ ಪಿ.ಎಚ್.ಪೂಜಾರ ಅವರ ಪರವಾಗಿ ಮತ ಚಲಾಯಿಸುವಂತೆ ಚರಂತಿಮಠ ಅವರು ಪ್ರಚಾರ ಮಾಡಿದ್ದರಿಂದ ಅವರು ಇಂದು ವಿಪ ಸದಸ್ಯರಾಗಿದ್ದಾರೆ. ಇದನ್ನು ಬಿಟ್ಟು ಹೀಗೆ ಸುಳ್ಳು ಹೇಳುವುದನ್ನು ಮುಂದುವರೆಸಿದರೆ ನಾವು ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.

ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಮುಖಂಡರಾದ ಶಿವಾನಂದ ಟವಳಿ, ರಾಜಶೇಖರ ಮುದೇನೂರ ಸೇರಿದಂತೆ ಇತರರಿದ್ದರು.