ಎನ್.ಆರ್.ಪುರ ತಾಲೂಕು ಬಿಜೆಪಿ ಅಧ್ಯಕ್ಷ ವಿ.ನೀಲೇಶ್‌ಗೆ ಆದೇಶ ಪ್ರತಿಯನ್ನು ಪಕ್ಷದ ಜಿಲ್ಲಾ ಅಧ್ಯಕ್ಷ ದೇವರಾಜ್ ಶೆಟ್ಟಿ, ಮಾಜಿ ಸಚಿವ ಡಿ.ಎನ್.ಜೀವರಾಜ್ ವಿತರಿಸಿದರು. ಅರುಣಕುಮಾರ್, ಎನ್.ಎಂ.ಕಾಂತರಾಜ್, ಭಾಸ್ಕರ್ ವೆನಿಲ್ಲಾ, ಎಚ್.ಡಿ.ಲೋಕೇಶ್, ಮಂಜುನಾಥ್ ಇತರರಿದ್ದರು. 
ಜಿಲ್ಲೆ

ವಿ.ನೀಲೇಶ್ ತಾಲೂಕು ಬಿಜೆಪಿ ಅಧ್ಯಕ್ಷ

ಎನ್.ಆರ್.ಪುರ: ತಾಲೂಕು ಬಿಜೆಪಿ ಅಧ್ಯಕ್ಷರಾಗಿ ವಿ.ನೀಲೇಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸೋಮವಾರ ತಾಲೂಕು ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿ ಡಾ. ಚೇತನ್ ಕಾರ್ಯನಿರ್ವಹಿಸಿದರು. ಈ ಹಿಂದೆ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾಗಿ ಹಾಗೂ ಶೃಂಗೇರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಅರುಣಕುಮಾರ್, ಡಿ.ಎನ್.ಜೀವರಾಜ್, ದೇವರಾಜ ಶೆಟ್ಟಿ, ರಶ್ಮಿ ದಯಾನಂದ್, ಪುಣ್ಯಪಾಲ್, ಪ್ರೇಮಾ ಶೆಟ್ಟಿ, ಕೆಸುವಿ ಮಂಜುನಾಥ್, ಎನ್.ಎಂ.ಕಾಂತರಾಜ್, ಭಾಸ್ಕರ್ ವೆನಿಲ್ಲಾ, ಎಚ್.ಡಿ.ಲೋಕೇಶ್, ಎ.ಬಿ.ಮಂಜುನಾಥ್ ಇತರರಿದ್ದರು.