ಜಿಲ್ಲೆ

ವಾಹನ ದಟ್ಟಣೆ ನಿವಾರಣೆಗೆ ಶೀಘ್ರದಲ್ಲೇ ಸಂಚಾರ ಸಮಸ್ಯೆ ಇತ್ಯರ್ಥ

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಹೆಚ್ಚುತಿರುವ ವಾಹನ ಸಂಚಾರ ದಟ್ಟಣೆ ನಿವಾರಿಸಲು ಶೀಘ್ರ ಕ್ರಮ ಕೈಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಡಿಸಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ಸಂಚಾರ ದಟ್ಟಣೆ ಹಾಗೂ ಸಮಸ್ಯೆ ಪರಿಹಾರ ಕುರಿತು ಈಗಾಗಲೇ ಪೊಲೀಸರು ಸಮೀಕ್ಷಾ ವರದಿ ಸಲ್ಲಿಸಿದ್ದಾರೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ನಿವಾರಿಸುವುದಾಗಿ ಹೇಳಿದರು.
ಖಾಸಗಿ, ಸರ್ಕಾರಿ ಬಸ್‌ಗಳ ಓಡಾಟದಿಂದ ಎಸ್‌ಬಿಐ ಬ್ಯಾಂಕ್ ಹಾಗೂ ಎಂಜಿ ವೃತ್ತದಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಗರ ಪ್ರವೇಶಿಸುವ-ಹೊರ ಹೋಗುವ ಬಸ್‌ಗಳ ಸಂಚಾರ ಮಾರ್ಗಗಳಲ್ಲಿ ಮಾಡಬೇಕಾದ ಬದಲಾವಣೆ, ನಿಲುಗಡೆ ಸ್ಥಳಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಅಪಘಾತಗಳನ್ನು ನಿಯಂತ್ರಿಸಲು ಚಳ್ಳಕೆರೆ ಗೇಟ್‌ನಲ್ಲಿ ಸಂಚಾರಿ ವೃತ್ತ ನಿರ್ಮಿಸಬೇಕು. ಅಲ್ಲಿಯ ರಾ.ಹೆ. ಕೆಳ ಸೇತುವೆ ರಸ್ತೆ ಇಕ್ಕೆಲಗಳಲ್ಲಿ ಗೂಡಂಗಡಿಗಳನ್ನು ತೆರವುಗೊಳಿಸಬೇಕು. ಸೂಕ್ತ ಸ್ಥಳ ಗುರುತಿಸಿ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಬೇಕು. ಬಸ್ ತಂಗುದಾಣ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತುರುವನೂರು ರಸ್ತೆಯಿಂದ ಜಿಲ್ಲಾ ಆಸ್ಪತ್ರೆಗೆ ತೆರಳುವ ಮಾರ್ಗ ಹಾಗೂ ಬಿ.ಡಿ.ರಸ್ತೆಯಲ್ಲಿ ಡಿವೈಡರ್ ತೆರವು ಗೊಳಿಸಬೇಕು. ಮೆದೇಹಳ್ಳಿ ಅಂಡರ್‌ಪಾಸ್ ಬಳಿ ಒಳಚರಂಡಿ ದುರಸ್ಥಿಯಲ್ಲಿದ್ದು ಸಮಸ್ಯೆಯಾಗಿದೆ. ತುರುವನೂರು ರಸ್ತೆ ಅಂಡರ್ ಪಾಸ್‌ನಲ್ಲೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಬಿಡಾಡಿ ದನಗಳ ಸಂಚಾರ, ಗೂಡಂಗಡಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಂಚಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಟಿ.ರಾಜು ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರು.
ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲು ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು, ಆಟೋ ನಿಲ್ದಾಣಗಳಿಗೆ 27 ಸ್ಥಳಗಳನ್ನು ಹಾಗೂ ಬೀದಿ ಬದಿ ವ್ಯಾಪಾರಿಗಳಿಗಾಗಿ 12 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ನಗರಸಭೆ ಆಯುಕ್ತೆ ಎಂ.ರೇಣುಕಾ ಹೇಳಿದರು.

ಹಿರಿಯೂರಲ್ಲಿ ಟ್ರಕ್ ಟರ್ಮಿನಲ್‌ಗೆ ಪ್ರಸ್ತಾವನೆ ಬಾಕ್ಸ್
ಹಿರಿಯೂರಲ್ಲಿ 20 ಎಕರೆ ವಿಸ್ತೀರ್ಣದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ವೆಂಕಟೇಶ್ ಅವರು ಆರ್‌ಟಿಒ ಭರತ್ ಎಂ.ಕಾಳಿಸಿಂಗೆ ಅವರಿಗೆ ಸೂಚಿಸಿದರು. 20 ವರ್ಷ ಪೂರೈಸಿದ ಅದಿರು ಲಾರಿ ವಾಹನಗಳ ನೋಂದಣಿ ರದ್ದುಪಡಿಸಲು ಇದೇ ವೇಳೆ ತಾಕೀತು ಮಾಡಿದರು.ಎಸ್‌ಪಿ ಧಮೇರ್ಂದರ್‌ಕುಮಾರ್‌ಮೀನಾ, ಲೋಕೋಯೋಗಿ ಇಲಾಖೆ ಇಇ ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.

  • ಶಿಶು ಕವಚ ಕಡ್ಡಾಯ
    ದ್ವಿಚಕ್ರ ಮೋಟಾರ್ ವಾಹನ ಸವಾರರು, ವಾಹನ ಚಾಲನೆ ವೇಳೆ 9 ತಿಂಗಳ ಮೇಲಿನ ಹಾಗೂ 4 ವರ್ಷ ವಯಸ್ಸಿನೊಳಗಿರುವ ಮಕ್ಕಳಿಗೆ ಶಿಶು ಕವಚ ತೊಡಿಸಿರುವುದನ್ನು ಕಡ್ಡಾಯಗೊಳಿಸಿದೆ. ಇಲ್ಲವಾದಲ್ಲಿ 1000 ರೂ. ದಂಡ ವಿಧಿಸಲಾಗುವುದು. ನಾಲ್ಕಕ್ಕಿಂತ ಅಧಿಕ ಆಸನಗಳಿರುವ ವಾಹನಗಳಲ್ಲಿ ವೆಹಿಕಲ್ ಲೋಕೇಷನ್ ಟ್ರಾೃಕಿಂಗ್ ಹಾಗೂ ಮಹಿಳೆ ಮತ್ತು ಮಕ್ಕಳ ಹಿತದೃಷ್ಟಿಯಿಂದ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ ಎಂದು ಕಾಳಿಸಿಂಗೆ ಹೇಳಿದರು.
  • *ಕೋಟ್
    ರಾ.ಹೆ.ಚಿತ್ರದುರ್ಗದ ಕೆಳಗೋಟೆ ಬಸವೇಶ್ವರ ಆಸ್ಪತ್ರೆ ಬಳಿ ರಸ್ತೆ ದಾಟಲು ಹೋಗಿ ಜನರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. 2020ರಿಂದ 4 ವರ್ಷಗಳಲ್ಲಿ 11 ಜನರು ಮೃತಪಟ್ಟಿದ್ದಾರೆ. ಜನರು ಹೆದ್ದಾರಿ ಪ್ರವೇಶಿಸದಂತೆ ಮೆಸ್ ಅಳವಡಿಸಬೇಕಿದೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸ ಬೇಕಿದೆ.
    ಧರ್ಮೇಂದರ್‌ಕುಮಾರ್‌ಮೀನಾ, ಎಸ್‌ಪಿ