ಜಿಲ್ಲೆ

ವಾಹನ ಚಾಲನೆ ವೇಳೆ ನಿರ್ಲಕ್ಷ್ಯ ಬೇಡ : ಸಬ್‌ಇನ್‌ಸ್ಪೆಕ್ಟರ್ ವರಲಕ್ಷ್ಮೀ ಎಚ್ಚರಿಕೆ ಸಂಚಾರ ನಿಯಮ ಅರಿವು ಜಾಥಾ


ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ


ರಸ್ತೆ ಅಪಘಾತದಲ್ಲಿ ಯುವಪೀಳಿಗೆಯೇ ಹೆಚ್ಚು ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿ. ಆದ್ದರಿಂದ ಯುವಜನರು ವಾಹನ ಚಾಲನೆಯನ್ನು ನಿರ್ಲಕ್ಷಿಸದೆ ಗಂಭೀರವಾಗಿ ಪರಿಗಣಿಸಬೇಕು ಎಂದು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ವರಲಕ್ಷ್ಮೀ ಎಚ್ಚರಿಕೆ ನೀಡಿದರು.
ನವೋದಯ ಚಾರಿಟಬಲ್ ಟಸ್ಟ್, ಪೊಲೀಸ್ ಇಲಾಖೆ ಹಾಗೂ ಸೇಂಟ್ ಜೋಸ್ೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಸಹಯೋಗದೊಂದಿಗೆ ದೊಡ್ಡಬಳ್ಳಾಪುರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಚಾರ ನಿಯಮ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಜನರು ಸಂಚಾರ ನಿಯಮ ಗಾಳಿಗೆ ತೂರಿ, ಕಾನೂನಿನ ಭಯವಿಲ್ಲದೆ ವಾಹನ ಚಲಾಯಿಸುವ ಮೂಲಕ ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ. ಆದ್ದರಿಂದ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಬೇಕು ಎಂದರು.
ಸಂಚಾರ ನಿಯಮ ರೂಪಿಸಿರುವುದು ನಮ್ಮೆಲ್ಲರ ಒಳಿತಿಗಾಗಿ ಎಂಬುದನ್ನು ತಿಳಿಯಬೇಕು ಎಂದು ನವೋದಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನವೋದಯ ಚೇತನ್ ಹೇಳಿದರು. ಪ್ರತಿ ವಾಹನ ಸವಾರರು ಕಡ್ಡಾಯವಾಗಿ ನಿಯಮ ಪಾಲಿಸಿದರೆ ಅಪಘಾತದಂತ ಸನ್ನಿವೇಶವೆ ಎದುರಾಗುವುದಿಲ್ಲ, ಅನವಶ್ಯಕವಾಗಿ ವೇಗವಾಗಿ ಸಂಚರಿಸುವುದು, ದಿಢೀರ್ ಬ್ರೇಕ್ ಹಾಕುವುದು, ಕರ್ಕಶವಾಗಿ ಹಾರನ್ ಮಾಡಿ ಇನ್ನಿತರ ಚಾಲಕರಿಗೆ ಗೊಂದಲ ಮೂಡಿಸುವಂತಹ ಕೃತ್ಯಗಳನ್ನು ಬಿಡಬೇಕು ಎಂದು ಸಲಹೆ ನೀಡಿದರು.
ಪ್ರವಾಸಿ ಮಂದಿರ ವೃತ್ತದಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಸಂಚಾರ ದೀಪಗಳನ್ನು ಅಳವಡಿಸಿರುವುದು ಹೆಮ್ಮೆಯ ವಿಷಯ. ರಸ್ತೆಯಲ್ಲಿ ವಾಹನ ನಿಲುಗಡೆಯ ಪಟ್ಟಿಗಳು ಇಲ್ಲದಿರುವ ಕಾರಣ ವಾಹನ ಸವಾರರಿಗೆ ಗೊಂದಲ ಸೃಷ್ಟಿಯಾಗುತ್ತಿತ್ತು. ಇದನ್ನು ಗಮನಿಸಿ ನಮ್ಮ ಸಂಸ್ಥೆಯಿಂದ ಬಿಳಿ ಪಟ್ಟಿ ಹಾಕಿ ವಾಹನ ಸವಾರರಿಗೆ ಅನುಕೂಲ ಮಾಡಿದ್ದೇವೆ ಎಂದರು. ಅವಘಡಗಳಂತಹ ಸನ್ನಿವೇಶಗಳನ್ನು ಒಬ್ಬರಿಂದ ತಡೆಗಟ್ಟಲು ಸಾಧ್ಯವಿಲ್ಲ ಪೊಲೀಸ್ ಇಲಾಖೆಯೊಂದಿಗೆ ವಾಹನ ಸವಾರರು, ಪಾದಚಾರಿಗಳ ಸಹಕಾರ ಅತ್ಯಗತ್ಯ ಎಂದು ನವೋದಯ ಚಾರಿಟಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಲೋಹಿತ್ ಹೇಳಿದರು.


ರಸ್ತೆ ಸುರಕ್ಷತೆ ಜಾಗೃತಿ : ಕಾಲೇಜು ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸುತ್ತ ಸಂಚಾರ ನಿಯಮ ಕುರಿತ ಪ್ಲೆಕ್ಸ್‌ಗಳನ್ನು ಪ್ರದರ್ಶಿಸಿದರು. ೋಷಣೆ ಕೂಗುತ್ತಾ ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು.