ಚಿತ್ರದುರ್ಗ: ನಗರದ ವಾಲ್ಮೀಕಿ ಭವನ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ನೀಡುವುದಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಅವರು ಭರವಸೆ ನೀಡಿದರು. ಭಾನುವಾರ ಮದಕರಿ ನಾಯಕರ ಪ್ರತಿಮೆಗೆ ಮಾಲಾರ್ಪಣೆ ಬಳಿಕ ವಾ ಲ್ಮೀಕಿ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು,ಭವನದ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಶೀಘ್ರದಲ್ಲೇ ಅದ್ದೂರಿಯಿಂದ ಉ ದ್ಘಾಟಿಸಲಾಗುವುದೆಂದರು.
ಚಿತ್ರದುರ್ಗ ತಾಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ,ಈಗ ಹಾಕಿರುವ ಫಿಕ್ಸ್ ಆಗಿರುವಂಥ ಆಸನಗಳ ಬ ದಲು ಅಗತ್ಯವಿದ್ದಾಗ ಬಳಸುವಂತೆ ಕುರ್ಚಿಗಳು ಹಾಕಬೇಕು.
ಭವನದ ಮೇಲೆ ಪ್ರತಿಮೆಗಳನ್ನು ನಿರ್ಮಿಸುವುದರೊಂದಿಗೆ ಭವನದ ಪೂರ್ಣ ಪ್ರಮಾಣದ ಅಭಿವೃದ್ಧಿಗೆ ತುರ್ತಾಗಿ ಅನುದಾನ ನೀಡ ಬೇಕೆಂದು ಕೋರಿದರು. ಈ ವೇಳೆ ಸಚಿವರು ಇಲಾಖೆ ಹಿರಿಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ,ಅಗತ್ಯ ಅನುದಾನ ದ ವಿವರ ಸಿದ್ಧಪಡಿಸುವಂತೆ ಸೂಚನೆ ನೀಡಿದರು.ಭವನದ ಅಭಿವೃದ್ಧಿಗೆ ಏಕಕಾಲಕ್ಕೆ ಅಗತ್ಯ ಹಣ ಬಿಡುಗಡೆ ಮಾಡುತ್ತೇನೆ. ಭವನದ ಅಭಿ ವೃದ್ಧಿಗೆ ಸಹಕರಿಸುವುದಾಗಿ ಮುಖಂಡರಿಗೆ ಭರವಸೆ ನೀಡಿದರು.
ರಾಜ್ಯಸಭಾ ಸದಸ್ಯ ಡಾ.ಸೈಯದ್‌ನಾಸೀರ್‌ಹುಸೇನ್, ಮಾಜಿ ಸಚಿವ ಎಚ್.ಆಂಜನೇಯ,ಕಾಂಗ್ರೆಸ್ ಎಸ್ಟಿ ಸೆಲ್ ಜಿಲ್ಲಾಧ್ಯಕ್ಷ ಅಂಜಿನಪ್ಪ, ಅಹೋಬಲ ಟಿವಿಎಸ್ ಶೋರೂಂ ಮಾಲೀಕ ಅರುಣ್,ಮುಖಂಡರಾದ ಗೋಪಾಲಸ್ವಾಮಿನಾಯಕ್,ದರ್ಶನ್‌ಇಂಗಳದಾಳ್,ಜಿಲ್ಲಾಪರಿ ಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಒ.ಪರಮೇಶ್ವರಪ್ಪ,ಮ್ಯಾನೇಜರ್ ದಯಾನಂದ್ ಮತ್ತಿತರರು ಇದ್ದರು.