ಹರಪನಹಳ್ಳಿ: ಮಹರ್ಷಿ ವಾಲ್ಮೀಕಿ ಹೆಸರಿನಲ್ಲೇ ದೊಡ್ಡ ಶಕ್ತಿಯಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಮತ್ತಿಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ರಾಮಾಯಣ ಮತ್ತು ಮಹಾಭಾರತ ಕಾವ್ಯಗಳು ಅತ್ಯಂತ ಪವಿತ್ರ ಗ್ರಂಥಗಳಾಗಿವೆ. ವಾಲ್ಮಿಕಿ ಅವರನ್ನು ಇಡೀ ಪ್ರಪಂಚವೇ ಸ್ಮರಿಸಬೇಕಿದ್ದು, ಅವರ ತತ್ವಾದರ್ಶಗಳನ್ನು ರೂಢಿಸಿಕೊಂಡು ನಡೆಯಬೇಕಿದೆ. ವಾಲ್ಮೀಕಿ ಸಮುದಾಯ ಧೈರ್ಯ, ಸಾಹಸ ಹಾಗೂ ನಿಷ್ಠೆಗೆ ಪ್ರಸಿದ್ದಿಯಾಗಿದೆ ಎಂದರು.
ರಾಜ್ಯ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಕೆ ಉಚ್ಚಂಗೆಪ್ಪ ಮಾತನಾಡಿ. ಮಹರ್ಷಿ ವಾಲ್ಮೀಕಿ ಅವರು ಪಂಡಿತ, ಶಿಕ್ಷಣಪ್ರೇಮಿ ಮತ್ತು ಆದರ್ಶ ಶಿಕ್ಷಕರಾಗಿದ್ದಾರೆ. ವಿದ್ಯೆ ಎಂಬುದು ದಿವ್ಯಜ್ಯೋತಿಯಿದ್ದಂತೆ. ವಿದ್ಯೆ ಇಲ್ಲದವರ ಬದುಕಿನಲ್ಲಿ ಅಂಧಕಾರ ತುಂಬಿರುತ್ತದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಎಸ್.ರೇವಣಸಿದ್ದಪ್ಪ ಮಾತನಾಡಿ. ಸಮಾಜ ಹಾಗೂ ಕುಟುಂಬ ಹೇಗಿರಬೇಕು ಎಂಬುದನ್ನು ರಾಮಾಯಣ ಕಾವ್ಯದಲ್ಲಿ ಸಂಪೂರ್ಣವಾಗಿ ಉಲ್ಲೇಖಿಸಲಾಗಿದೆ ಎಂದರು.
ಮುಖಂಡ ತಳವಾರ ಬೆಟ್ಟನಗೌಡ ಮಾತನಾಡಿ. ನಾಯಕ ಸಮುದಾಯಕ್ಕೆ ಪ್ರಾಚೀನ ಇತಿಹಾಸವಿದೆ, ಹಲವಾರು ಶತಮಾನಗಳ ಹಿಂದೆಯೇ ರಾಜ್ಯವನ್ನು ಆಳಿದ ಸಮುದಾಯ ನಮ್ಮದು. ನಾವು ಹುಟ್ಟು ನಾಯಕತ್ವ ಗುಣ ಹೊಂದಿದ್ದು, ಯಾರಿಂದಲೂ ನಾಯಕತ್ವ ಕಲಿಯಬೇಕಾದ ಅಗತ್ಯವಿಲ್ಲವೆಂದರು.
ವಕೀಲ ಎಸ್.ಎಂ.ನಾಗರಾಜ್, ಸಣ್ಣ ನಿಂಗಪ್ಪ, ಕೊಟ್ರಗೌಡ, ಕೆ ಪ್ರಕಾಶ, ನಾಗರಾಜ ರಾಂಪುರ, ತಲವಾರ ನಾಗರಾಜ, ದೊಡ್ಡಬಸಪ್ಪ, ಟಿ.ಲಂಕೇಶ, ಗೌರೇಜಪ್ಪ, ಸಂತೋಷ, ಬಸಂತಪ್ಪ, ಕೆ.ಹನುಮಂತಪ್ಪ, ಡಿ.ರೇವಣ್ಣ, ಸಣ್ಣಮುರಡೆಪ್ಪ, ಪ್ರಕಾಶ, ಶರಣಪ್ಪ ಇತರರಿದ್ದರು.