ಹುಮನಾಬಾದ್: ಭಾರತದ ಮೊಟ್ಟ ಮೊದಲ ಮಹಾಕಾವ್ಯ, ಪರಮ ಪವಿತ್ರ ರಾಮಾಯಣ ಗ್ರಂಥ ನೀಡಿದ ಮಹರ್ಷಿ ವಾಲ್ಮೀಕಿ ಆದರ್ಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಹುಡಗಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ನಿಮಿತ್ತ ಶನಿವಾರ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅವರು ಸರ್ವ ಜನಾಂಗಕ್ಕೂ ಸೇರಿದವರಿದ್ದಾರೆ. ಜಾತಿ, ಮತ, ಪಂಥಗಳನ್ನು ಮೀರಿ ಬೆಳೆದ ಮಹಾಮಾನವತಾವಾದಿಯಾಗಿದ್ದರು. ರಾಮಾಯಣ ಮಹಾಕಾವ್ಯದಲ್ಲಿ ಭಾರತದ ಮಾದರಿ ಸಂಸ್ಕೃತಿ, ಸಂಸ್ಕಾರ, ರೀತಿ ನೀತಿ, ಆಚಾರ, ವಿಚಾರ, ಉಡುಗೆ ತೊಡಿಗೆಗಳನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಆದ್ದರಿಂದ ವಾಲ್ಮೀಕಿ, ಭಕ್ತ ಕನಕದಾಸ, ಬುದ್ಧ, ಜಗಜ್ಯೋತಿ ಬಸವಣ್ಣ, ಡಾ.ಅಂಬೇಡ್ಕರ್ ಆಚಾರ ಗುಣಗಳನ್ನು ಮೈಗೂಡಿಸಿಕೊಂಡು ಅವರಂತೆ ಬಾಳಲು ಪ್ರಯತ್ನ ಮಾಡೋಣ ಎಂದು ಹೇಳಿದರು.
ಅರುಣ ಬಾವಗಿ, ದಯಾನಂದ ಮೇತ್ರೆ, ನಾಗಭೂಷಣ ಸಂಗಮ, ಲಿಂಗರಾಜ ಮೆಲ್ದೋಡ್ಡಿ, ಅಭಿ ವಾಡೇಕರ, ಫೈಜಲ್ ಅಹ್ಮದ್, ಶಿವಕುಮಾರ ಮಾಶೆಟ್ಟಿ, ಅನಿಲ ನಂದಿ, ಸುನೀಲ ಪತ್ರಿ ಇತರರಿದ್ದರು. ಗ್ರಾಮದಲ್ಲಿ ವಾಲ್ಮೀಕಿ ಮೆರವಣಿಗೆಗೆ ಶಾಸಕರು ಚಾಲನೆ ನೀಡಿದರು.