ಜಿಲ್ಲೆ

ವಾರ್ಷಿಕೋತ್ಸವ 26ರಿಂದ

ವಿಜಯವಾಣಿ ಸುದ್ದಿಜಾಲ ಧಾರವಾಡ
ರವಿವಾರಪೇಟ ಬಾಳೆಕಾಯಿ ಓಣಿಯ ನಾಮದೇವ ಹರಿ ಮಂದಿರದಲ್ಲಿ ಸ್ಥಾಪಿಸಲಾದ ಗಣಪತಿ, ವಿಠ್ಠಲ-ರುಕ್ಮಾಯಿ ಹಾಗೂ ಸಂತ ಶಿರೋಮಣಿ ನಾಮದೇವ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಯ 10ನೇ ವಾರ್ಷಿಕೋತ್ಸವವನ್ನು ಆ. 26ರಿಂದ 28ರವರೆಗೆ ಏರ್ಪಡಿಸಲಾಗಿದೆ ಎಂದು ಅಖಿಲ ಕರ್ನಾಟಕ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ನಾರಾಯಣ ಕೋಪರ್ಡೆ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 26ರಂದು ಬೆಳಗ್ಗೆ 10 ಗಂಟೆಗೆ ಪೋಥಿ ಸ್ಥಾಪನೆ, ಭಜನೆ ಕೀರ್ತನೆ, ಸಂಜೆ 5ಕ್ಕೆ ಮಕ್ಕಳು ಮತ್ತು ಮಹಿಳಾ ಮಂಡಳದವರಿಂದ ಸಾಂಸ್ಕೃತಿಕ ಕಾರ್ಯಕ್ರಮ, 7 ಗಂಟೆಗೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಸನ್ಮಾನ ಮಾಡಲಾಗುವುದು. ರಾತ್ರಿ 8 ಗಂಟೆಗೆ ಸಂತ ನಾಮದೇವ ಸಹಕಾರ ಸಂಘ ನಿಯಮಿತ ಉದ್ಘಾಟನೆ ಮಾಡಲಾಗುವುದು ಎಂದರು.
ಆ. 27ರಂದು ಬೆಳಗ್ಗೆ 5 ಗಂಟೆಗೆ ಕಾಕಡಾರತಿ, ಅಭಿಷೇಕ, ಅಲಂಕಾರ ಪೂಜೆ ನೆರವೇರಲಿದೆ. ಬೆಳಗ್ಗೆ 11ಕ್ಕೆ ಸಂತ ಮಂಡಳಿ ಮತ್ತು ರುಕ್ಮಿಣಿ ಮಹಿಳಾ ಮಂಡಳದ ಸದಸ್ಯರಿಂದ ಜ್ಞಾನೇಶ್ವರಿ ಪಾರಾಯಣ ಭಜನೆ, ಸಂಜೆ 4ಕ್ಕೆ ನಾಮ ಜಪ, ಪ್ರವಚನ, ಸಂಜೆ 6ಕ್ಕೆ ಪಂಢರಪುರ ಗುರುವರ್ಯ ಯಶವಂತ ಮಹಾರಾಜ ಪ್ರಭಾಕರ ಭುವಾ ಬೊಧಲೆ ಹಾಗೂ ಆಮ್ಹಿ ಕರ್ನಾಟಕ ವಾರಕರಿ ಮಂಡಳಿಯಿಂದ ಹರಿ ಕೀರ್ತನೆ ನಡೆಯಲಿದೆ. ಆ. 28ರಂದು ಬೆಳಗ್ಗೆ 9 ಗಂಟೆಗೆ ದಿಂಡಿ ಸೋಹಾಳ, 11ಕ್ಕೆ ಕಲಾಕೀರ್ತನ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದರು.
ನಾಮದೇವ ಸಿಂಪಿ ಸಮಾಜದ ಜನಸಂಖ್ಯೆ ರಾಜ್ಯದಲ್ಲಿ 6 ರಿಂದ 7ಲಕ್ಷವಿದ್ದು, ಅನೇಕ ಸೌಲಭ್ಯಗಳಿಂದ ವಚಿತವಾಗಿದೆ. ಧಾರವಾಡದಲ್ಲಿ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಜಾಗಬೇಕಿದ್ದು, ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.
ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಮುರಳೀಧರ ಹಾಸಲ್ಕರ್, ಲಕ್ಷ್ಮಣ ಕೋಳೆಕರ, ಲಕ್ಷ್ಮಣರಾವ್ ಮುಳೆ, ಪ್ರವೀಣ ಸದರೆ, ಆನಂದ ರೇಣಕೆ, ಸುರೇಖಾ ಚಿಕ್ಕೊರ್ಡೆ, ರಶ್ಮಿ ಪಿಸೆ, ಇತರರು ಇದ್ದರು.