ನಾಪೋಕ್ಲು ಬಳಿಯ ಬೇತು ಗ್ರಾಮದ ಶ್ರೀಮಕ್ಕಿ ಶಾಸ್ತಾವು ಸನ್ನಿಧಿ 
ಜಿಲ್ಲೆ

ವಾರ್ಷಿಕ ಹಬ್ಬಕ್ಕೆ ಮಕ್ಕಿ ಶಾಸ್ತಾವು ದೇವಸ್ಥಾನ ಸಜ್ಜು

ನಾಪೋಕ್ಲು: ಸಮೀಪದ ಬೇತು ಗ್ರಾಮದಲ್ಲಿನ ಶ್ರೀ ಮಕ್ಕಿ ಶಾಸ್ತಾವು ದೇವಸ್ಥಾನ ವಾರ್ಷಿಕ ಹಬ್ಬಕ್ಕೆ ಅಣಿಯಾಗುತ್ತಿದೆ.

ವರ್ಷಕ್ಕೆ ಎರಡು ಬಾರಿ ಹಬ್ಬ ನಡೆಯಲಿದ್ದು, ಅದೇ ಅಲ್ಲಿನ ಪ್ರಮುಖ ಆಕರ್ಷಣೆ. ಅಸಂಖ್ಯಾತ ಭಕ್ತರು ಸೇರಿ ಸಂಭ್ರಮಿಸುವ ಹಬ್ಬ ಡಿಸೆಂಬರ್ ಹಾಗೂ ಮೇ ನಲ್ಲಿ ನಡೆಯಲಿದೆ. ಎತ್ತೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ಮೇಲೆರಿ.. ಮುಂತಾದ ಆಚರಣೆಗಳೊಂದಿಗೆ ಶ್ರೀ ಶಾಸ್ತಾವು ಹಬ್ಬ ನಡೆಯಲಿದೆ.

ಡಿ.15 ರಂದು ಹರಕೆಯ ನಾಯಿ ಒಪ್ಪಿಸುವುದು, 18ರಂದು ಕೊಟ್ಟಿ ಹಾಡುವುದು, 19 ರಂದು ರಾತ್ರಿ ದೀಪಾರಾಧನೆ, 20ರಂದು ಬೆಳಿಗ್ಗೆ ಅಜ್ಜಪ್ಪ ಕೋಲ ಮತ್ತು ವಿಷ್ಣುಮೂರ್ತಿ (ಮೇಲೇರಿ) ಅಗ್ನಿ ಪ್ರವೇಶ, ಅನ್ನದಾನ, ಭಕ್ತರು ಹರಕ್ಕೆ ಒಪ್ಪಿಸುವುದರೊಂದಿಗೆ ವಾರ್ಷಿಕ ಹಬ್ಬ ನಡೆಯಲಿದೆ.