ಜಿಲ್ಲೆ

ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಮಾ.8ರಂದು

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಮಾ.8ರಂದು ಬೆಳಗ್ಗೆ 11ಗಂಟೆಗೆ ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಬೆಂಗಳೂರು ಹೊರತು ಪಡಿಸಿ ಇದೇ ಪ್ರಥಮ ಬಾರಿಗೆ ಚಿತ್ರದುರ್ಗದಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಪ್ರಾಧಿಕಾರ ದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪುರಸ್ಕೃತರ ಹೆ ಸರು ಪ್ರಕಟಿಸಿ ಮಾತನಾಡಿ,2005ರಿಂದ ಈವರೆಗೆ ಪ್ರತಿ ವರ್ಷ 5-5 ರಂತೆ 80 ಸಾಧಕರನ್ನು ಗೌರವಿಸಲಾಗಿದೆ. ದುರ್ಗದ ಸಮಾರಂಭದ ದೊಂದಿಗೆ ಪ್ರಾಧಿಕಾರದಿಂದ ಪುರಸ್ಕೃತರಾದವರ ಸಾಧಕರ ಸಂಖ್ಯೆ100ಕ್ಕೆ ತಲುಪಲಿದೆ ಎಂದರು.

ಗೌರವ ಪ್ರಶಸ್ತಿ ಪುರಸ್ಕೃತರಿಗೆ 50 ಸಾವಿರ ರೂ.ನಗದು,ಸ್ಮರಣಿಕೆ ಹಾಗೂ ಪುಸ್ತಕ ಬಹುಮಾನ ಪುರಸ್ಕೃತರಿಗೆ ತಲಾ 25 ಸಾವಿರ ರೂ.ನಗದು, ಸ್ಮರಣಿಕೆ ಯೊಂದಿಗೆ ಗೌರವಿಸಲಾಗುವುದು. 2023 ಹಾಗೂ 2024ನೇ ಸಾಲಿನ ಗೌರವ ಪ್ರಶಸ್ತಿಯನ್ನು ಅನುವಾದ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಸಾಧಕರಿಗೆ ಹಾಗೂ 2022 ಹಾಗೂ 2023ನೇ ಸಾಲಿನ 10 ಅತ್ಯುತ್ತಮ ಅನುವಾದ ಪುಸ್ತಕಗಳ ಲೇಖಕರಿಗೆ ಪುಸ್ತಕ ಬಹು ಮಾನ ವಿತರಿಸಲಾಗುವುದು. ಐದು ಪ್ರಕಾರಗಳಲ್ಲಿ ಆಯ್ಕೆಯಾಗಿರುವ ಅತ್ಯುತ್ತಮ ಪುಸ್ತಕಗಳ ಲೇಖಕರಿಗೆ ಬಹುಮಾನ ವಿತರಿಸಲಾಗುವುದು.

ಸಮಾರಂಭದ ಸಾನ್ನಿಧ್ಯವನ್ನು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಿಗೆ ಪ್ರಶಸ್ತಿ ಪ್ರದಾನ ಹಾಗೂ ಬಹುಮಾನ ವಿತರಣೆ ನಡೆಸಿಕೊಡುವರು. ಪ್ರಶಸ್ತಿ ಪುರಸ್ಕೃತರ ಪುಸ್ತಕ ವನ್ನು ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಬಿಡುಗಡೆ ಮಾಡುವರು.

ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಉಸ್ತುವಾರಿ ಸಚಿವ ಡಿ.ಸುಧಾಕರ್,ಸಂಸದ ಗೋವಿಂದ ಎಂ.ಕಾರಜೋ ಳ,ಶಾಸಕರು,ವಿಧಾನಪರಿಷತ್ ಸದಸ್ಯರು,ನಿಗಮ,ಮಂಡಳಿ,ಪ್ರಾಧಿಕಾರ,ನಗರಸಭೆ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದರು. ಪ್ರಾಧಿಕಾರದ ಸದಸ್ಯ ಡಾ.ಜೆ.ಕರಿಯಪ್ಪ ಮಾಳಿಗೆ,ರಿಜಿಸ್ಟ್ರಾರ್ ಈಶ್ವರ್.ಕು.ಮಿರ್ಜಿ, ಕನ್ನಡ ಮ ತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಇದ್ದರು.

ಪ್ರಶಸ್ತಿ,ಬಹುಮಾನಕ್ಕೆ ಭಾಜನರು

2023ನೇ ಸಾಲಿನ ಗೌರವ ಪ್ರಶಸ್ತಿಗೆ ಪ್ರೊ.ಎಚ್.ಎಸ್.ರಾಘವೇಂದ್ರರಾವ್,ವಿನಯಚೈತನ್ಯ,ಡಾ.ಎಚ್.ಎಂ.ಕುಮಾರಸ್ವಾಮಿ,ಡಾ.ನ ಟರಾಜ್‌ಹುಳಿಯಾರ್,ಡಾ.ದು.ಸರಸ್ವತಿ. 2024ನೇ ಸಾಲಿನ ಗೌರವ ಪ್ರಶಸ್ತಿಗೆ ಡಾ.ಆರ್.ಕೆ.ಕುಲಕರ್ಣಿ,ಡಾ.ಕರೀಗೌಡ ಬೀಚನಹಳ್ಳಿ,ಡಾ. ರಾಜೇಂದ್ರಚೆನ್ನಿ,ಬೋಡೆ ರಿಯಾಜ್ ಅಹ್ಮದ್,ಡಾ.ಬಸು ಬೇವಿನಗಿಡದ ಅವರು ಭಾಜನರಾಗಿದ್ದಾರೆ.

2022ನೇ ಸಾಲಿನ ಪುಸ್ತಕ ಬಹುಮಾನಗಳಿಗೆ ಕೆ.ಆರ್.ಮೈತ್ರಿ(ಛ್ಜಿಟಖ್ಠ್ಞಜಚಿಛ್ಟ),ಜಯಶ್ರೀಭಟ್(ದಿ ಚಾಯ್ಸ),ಬಿ.ಆ ರ್.ಜಯರಾಮರಾಜೇ ಅರಸ್(ಹೆಣ ಹೊರುವವನ ವೃತ್ತಾಂತ),ಡಾ.ವಿಕ್ರಮ ವಿಸಾಜಿ(ದೇಹವೇ ದೇಶ)ಹಾಗೂ ಎಂ.ಜಿ.ಶುಭಮಂಗಳ(ಜಾಲ).

2023ನೇ ಸಾಲಿನ ಪುಸ್ತಕ ಬಹುಮಾನಗಳಿಗೆ ಸುಕನ್ಯಾಕನಾರಳ್ಳಿ(ಔಟಛಿ ಚ್ಞ ಠಿಛ್ಟಿ ಊ್ಝಟಡಿ ಟಜಛಿಠಿಛ್ಟಿ),ಶ್ರೀಧರ ಹೆ ಗ್ಗೋಡು(ಪಾತ್ರ ಪ್ರವೇಶ),ವಿಕಾಸ್ ಆರ್.ಮೌರ್ಯ(ಅಂಬೇಡ್ಕರ್ ಜಗತ್ತು),ಸುಬ್ಬಯ್ಯ ಜಿ.ಭಾಗ್ವತ್(ನನ್ನ ಪಿತಾಮಹ;ಮಹಾತ್ಮಗಾಂಧಿ)ಹಾಗೂ ಡಾ.ಶ್ರೀ ತೋಂಟದ ಸಿದ್ದರಾಮ ಸ್ವಾಮೀಜಿ(ತೌಲನಿಕ ಧರ್ಮದರ್ಶನ)ಅವರು ಪುರಸ್ಕೃತರಾಗಿದ್ದಾರೆ.

-------------