ಜಿಲ್ಲೆ

ವಾಯು ಮಾಲೀನ್ಯ ತಡೆಗೆ ಕೈಜೋಡಿಸಿ

ರಾಯಚೂರು: ವಾಯು ಮಾಲೀನ್ಯ ತಡೆಯಲು ಎಲ್ಲರೂ ಕೈಜೋಡಿಸಬೇಕಾಗಿದ್ದು, ಸಾರ್ವಜನಿಕರು ತಮ್ಮ ವಾಹನಗಳನ್ನು ನಿಯಮಿತವಾಗಿ ವಾಯು ಮಾಲೀನ್ಯ ತಪಾಸಣೆಗೆ ಒಳಪಡಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಕಾರಿ ವಿನಯಾ ಕಾಟೋಕರ್ ಹೇಳಿದರು.
ಸ್ಥಳೀಯ ಪ್ರಾದೇಶಿಕ ಸಾರಿಗೆ ಕಾರ್ಯಾಲಯದಲ್ಲಿ ವಾಯು ಮಾಲೀನ್ಯ ತಡೆ ಮಾಸಾಚರಣೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರ ಕಣ್ಣಿನ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಬುಗ್ಗಾರೆಡ್ಡಿ, ಎಸ್.ಸಿ.ನಾಗವಂದಾ, ವೈದ್ಯರಾದ ಡಾ.ಎಂ.ಎಚ್.ನದೀಮ್, ಡಾ.ಸಾರಾ ಓಸಮನ್ ಉಪಸ್ಥಿತರಿದ್ದರು.