ಬಿಡದಿ : ತಾಯಪ್ಪನದೊಡ್ಡಿ ಮುಖ್ಯರಸ್ತೆಯ ಸ್ಮಶಾನದ ಬಳಿ ಕಿಡಿಗೇಡಿಗಳು ವಾಮಾಚಾರ ಮಾಡಿರುವುದು ಗ್ರಾಮಸ್ಥರ ಭೀತಿಗೆ ಕಾರಣವಾಗಿದೆ. ಗ್ರಾಮದ ಮನೆಗಳ ಮುಂದೆಯೂ ಅರಿಶಿಣ-ಕುಂಕುಮ ಚೆಲ್ಲುತ್ತಿದ್ದಾರೆ. ಪ್ರತಿ ಹುಣ್ಣಿಮೆ, ಅಮಾವಾಸ್ಯೆಗಳಲ್ಲಿ ಕೃತ್ಯಗಳು ನಡೆಯುತ್ತಿವೆ.
ಗಾರೆಪಾಳ್ಯ ಮತ್ತು ತಾಯಪ್ಪನದೊಡ್ಡಿ ತಿರುವು ಬಳಿ ಇರುವ ಗುಂಡು ತೋಪನ್ನು ಕಿಡಿಗೇಡಿಗಳು ವಾಮಾಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಗ್ರಾಮದ ಮನೆಗಳ ಮುಂದೆ ನಿಂಬೆಹಣ್ಣು, ಮೊಟ್ಟೆ ಒಡೆಯುತ್ತಿದ್ದಾರೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ತೆರಳುವವರೂ ಇದರಿಂದ ಭೀತಿಗೊಳಗಾಗಿದ್ದಾರೆ.
ಗ್ರಾಮದಲ್ಲಿ ಬಿಡದಿ ಠಾಣೆಯ ಔಟ್ಪೋಸ್ಟ್ ಇದ್ದು, ವಾಮಾಚಾರ ಮಾಡುತ್ತಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಶಿಕ್ಷೆಗೊಳಪಡಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಮಣ್ಣಿನ ಗೊಂಬೆ ಕೂರಿಸಿ ಪೂಜಾ ವಸ್ತುಗಳನ್ನು ಬಳಕೆ ಮಾಡಿದ್ದಾರೆ. ಇದು ಗ್ರಾಮಸ್ಥರ ಭಯಕ್ಕೆ ಕಾರಣವಾಗಿದೆ. ಕೂಡಲೇ ದುಷ್ಕರ್ವಿುಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು. | ಎಸ್.ಎಚ್. ಹರಿಪ್ರಸಾದ್, ತಾಯಪ್ಪನದೊಡ್ಡಿ ತಾಯಪ್ಪನ ದೊಡ್ಡಿಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುವವರೇ ಅಧಿಕ ಮಂದಿ ಇದ್ದಾರೆ. ತಿಂಗಳಲ್ಲಿ 2 ಬಾರಿ ವಾಮಾಚಾರ ನಡೆಯುತ್ತದೆ. ಇದರ ಹಿಂದೆ ಇರುವವರನ್ನು ಪತ್ತೆ ಮಾಡಬೇಕು. | ಸತ್ಯನಾರಾಯಣ, ಎಂಪಿಸಿಎಸ್ ಕಾರ್ಯದರ್ಶಿ, ತಾಯಪ್ಪನದೊಡ್ಡಿhttps://www.vijayavani.net/bihar-election-upa-finalises-seatsharing/