ಜಿಲ್ಲೆ

ವಾಮಾಚಾರ ಮಾಡಿ ಸಿಕ್ಕಿ ಬಿದ್ದ ಆಸಾಮಿ!

ಹುಲಿಯೂರುದುರ್ಗ: ಆರ್​.ಬ್ಯಾಡರಹಳ್ಳಿಯ ಚಂದ್ರಮ್ಮ ಎಂಬುವವರ ಮನೆಯಲ್ಲಿ ಗ್ರಾಮದ ವ್ಯಕ್ತಿಯೇ ವಾಮಾಚಾರ ಮಾಡಿರುವುದು ಮನೆಯ ಸಿಸಿ ಕ್ಯಾಮಾರದಲ್ಲಿ ತಿಳಿದು ಬಂದಿದೆ. ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಆರ್​.ಬ್ಯಾಡರಹಳ್ಳಿಯ ಚಂದ್ರಮ್ಮ ಎಂಬುವವರ ಮನೆಯಲ್ಲಿ ಒಂದು ತಿಂಗಳ ಹಿಂದೆ ಕಳ್ಳತನವಾಗಿತ್ತು. ಕಳ್ಳರು 25 ಗ್ರಾಂ ಚಿನ್ನಾಭರಣ ಹಾಗೂ 1 ಲಕ್ಷ ನಗದು ದೊಚಿದರು. ಕಳ್ಳತನದ ಬಳಿಕ ಮನೆಯ ಸುರಕ್ಷತೆಯ ದೃಷ್ಟಿಯಿಂದ ಮನೆಗೆ ಸಿ.ಸಿ ಕ್ಯಾಮರ್​ ಅಳವಡಿಸಲಾಗಿತ್ತು. ಆದರೆ ಇದೆ ಗ್ರಾಮದ ಮೋಟೆಗೌಡ ಎಂಬಾತ ಚಂದ್ರಮ್ಮನ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬಳಿ ಬಂದು ಕೋಳಿಮೊಟ್ಟೆ, ನಿಂಬೆಹಣ್ಣು, ಅರಿಶಿಣ, ಕುಂಕುಮ ಹಾಗೂ ಕೋಳಿ ಕತ್ತರಿಸಿರುವ ರಕ್ತ ಮತ್ತು ಬಟ್ಟೆ ಎಸೆದು ವಾಮಾಚಾರ ಮಾಡಿ ಹೋಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಮನೆಯವರ ಆತಂಕಕ್ಕೆ ಕಾರಣವಾಗಿದೆ. ಆರೋಪಿ ಬ್ಯಾಡರಹಳ್ಳಿ ಮೊಟೆಗೌಡನ ವಿರುದ್ಧ ಹುಲಿಯೂರುದುರ್ಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.