ಚಿತ್ರದುರ್ಗ: ಹಿರಿಯೂರು ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ವಿವಿ ಸಾಗರ ಜಲಾಶಯ ನೀರಾವರಿ ಸಲಹಾ ಸಮಿತಿ ನಿರ್ಧರಿಸಿ ದೆ. ಮೇ10ರಿಂದ 25 ದಿನಗಳ ಕಾಲ ಬೇಸಿಗೆ ಹಂಗಾಮಿಗೆ 2ನೇ ಹಂತದಲ್ಲಿ ನೀರು ಹರಿಸಲು ಡಿಸಿ ಟಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ತೀರ್ಮಾನಿಸಿದೆ.
ಅಚ್ಚುಕಟ್ಟು ಪ್ರದೇಶಕ್ಕೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರಿನ ಅಗತ್ಯವಿರುವುದನ್ನರಿತು ನೀರು ಹರಿಸಲಾಗುತ್ತಿದೆ. ಬರಗಾಲ ಮತ್ತು ಬೇಸಿಗೆಯ ಈ ಸಂದರ್ಭದಲ್ಲಿ ಅನಗತ್ಯವಾಗಿ ನೀರನ್ನು ವ್ಯರ್ಥ ಮಾಡದೆ ಮುತುವರ್ಜಿಯಿಂದ ಬಳಸುವಂತೆ ಡಿಸಿ ರೈತರಿಗೆ ಮನವಿ ಮಾಡಿದರು.
ಅಗತ್ಯ,ಅನಿವಾರ‌್ಯವಿರುವ ಕಡೆ ನೀರು ಬಳಸ ಬೇಕು. ಬೀಳು ಭೂಮಿಗೆ ಹರಿಸಬಾರದು. ನೀರು ವ್ಯರ್ಥವಾಗುವುದು ಕಂಡು ಬಂದರೆ ಕೂಡಲೇ ಸ್ಥಗಿತಗೊಳಿಸಲಾಗುವುದು. ವಾಣಿಜ್ಯ ಉದ್ದೇಶಕ್ಕಾಗಿ ಟ್ಯಾಂಕರ್ ಮೂಲಕ ನೀರು ಮಾರಾಟ ಮಾಡಬಾರದು. ವಾಣಿಜ್ಯ ಉ ದ್ದೇಶಕ್ಕೆ ಬಳಸಿದರೆ ತಪ್ಪಿತ್ಥರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದೆಂದು ಎಚ್ಚರಿಸಿದರು.
ನೀರು ಹರಿಸುವ ಮುನ್ನ ಅಚ್ಚುಕಟ್ಟು ಪ್ರದೇಶಗಳಲ್ಲಿರುವ ಕೊಳವೆಬಾವಿಗಳ ನೀರಿನ ಮಟ್ಟ ಹಾಗೂ ನೀರು ಹರಿಸಿದ ನಂತರದ ನೀರಿನ ಮಟ್ಟದ ಕುರಿತು ಸಮೀಕ್ಷೆ ನಡೆಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ
ವಿವಿ ಸಾಗರ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ 30.422 ಟಿಎಂಸಿ ಇದೆ. ಜಲಾಶಯ ವ್ಯಾಪ್ತಿಯಲ್ಲಿ 12135 ಹೆಕ್ಟೇರ್ ಅ ಚ್ಚುಕಟ್ಟು ಪ್ರದೇಶವಿದೆ. ತೋಟಗಾರಿಕೆ ಬೆಳೆಗಳಾದ ತೆಂಗು,ಅಡಿಕೆ,ಬಾಳೆ ವಿಸ್ತೀರ್ಣ 5557 ಹೆಕ್ಟೇರ್ ಇದ್ದು,6578.00 ಹೆಕ್ಟೇರ್ ಖುಷ್ಕಿ ಜ ಮೀನಿದೆ.
ಬುಧವಾರ ಜಲಾಶಯದಲ್ಲಿ 112 ಅಡಿ ನೀರಿದ್ದು,ಈ ಮಟ್ಟಕ್ಕೆ ನೀರಿನ ಸಂಗ್ರಹಣೆ 16.96 ಟಿಎಂಸಿಗಳಾಗಿದೆ. ಇದರಲ್ಲಿ 1.87 ಟಿಎಂಸಿ ನೀರು ಬಳಸಲಾಗದು ಹಾಗೂ ಬಳಕೆಗೆ 15.09 ಟಿಎಂಸಿ ನೀರು ಲಭ್ಯವಿದೆ. ಹಿರಿಯೂರು,ಚಿತ್ರದುರ್ಗ, ಚಳ್ಳಕೆರೆ ನಗರಗಳು, ಚಳ್ಳಕೆರೆ ತಾ ಲೂಕಿನ ಸಂಶೋಧನಾ ಕೇಂದ್ರಗಳು ಹಾಗೂ 18 ಹಳ್ಳಿಗಳ ಕುಡಿಯುವ ನೀರಿಗೆ 0.2115 ಟಿಎಂಸಿ ಅಗತ್ಯವಿದೆ. ನೀರು ಹರಿಸುವುದರಿಂ ದ ಹಿರಿಯೂರು ತಾಲೂಕಿನ 38 ಗ್ರಾಮಗಳ ಅಂತರ್ಜಲ ಅಭಿವೃದ್ಧಿ ಹಾಗೂ ಕುಡಿವ ನೀರಿ ನ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗಲಿದೆ ಎಂದು ಡಿಸಿ ಹೇಳಿದರು.
ವಿಶ್ವೇಶ್ವರಯ್ಯ ಜಲ ನಿಗಮದ ವಿವಿ ಸಾಗರ ಉಪವಿಭಾಗ ಹಿರಿಯೂರು ಕಾರ್ಯಪಾಲಕ ಇಂಜಿನಿಯರ್ ಬಾರಿಕರ್‌ಚಂದ್ರಪ್ಪ,ಸಹಾ ಯಕ ಕಾರ್ಯಪಾಲಕ ಇಂಜಿನಿಯರ್‌ವಿಜಯಕುಮಾರ್,ಕೃಷಿಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎಂ.ವಿ.ಮಂಜುನಾಥ್,ಶಿರಸ್ತೇದಾ ರ್‌ಸಣ್ಣಪ್ಪ,ಸಲಹಾ ಸಮಿತಿ ಸದಸ್ಯರಾದ ಸುಂದರೇಶ್,ಅಸಿಫ್‌ಆಲಿ,ಅನಿಲ್‌ಕುಮಾರ್,ನಾಗರಾಜ್ ಮತ್ತಿತರರು ಇದ್ದರು.
(ಸಿಟಿಡಿ 8 ವಿವಿ ಸಾಗರ)
ಚಿತ್ರದುರ್ಗದಲ್ಲಿ ಬುಧವಾರ ಏರ್ಪಡಿಸಿದ್ದ ವಿವಿ ಸಾಗರ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಡಿಸಿ ಟಿ.ವೆಂಕಟೇಶ್,ಬಾ ರಿಕರ್ ಚಂದ್ರಪ್ಪ,ವಿಜಯಕುಮಾರ್,ಎಂ.ವಿ.ಮಂಜುನಾಥ್,ಸಣ್ಣಪ್ಪ ಮತ್ತಿತರ ಅಧಿಕಾರಿಗಳು ಹಾಗೂ ಸಲಹಾ ಸಮಿತಿ ಸದಸ್ಯರು ಇದ್ದರು.