ದಾಂಡೇಲಿ: ನಗರದ ಲೆನಿನ್ ರಸ್ತೆಯಲ್ಲಿ ನಗರಸಭೆಯಿಂದ ಬಾಡಿಗೆ ಪಡೆದ ಅಂಗಡಿ ಬಾಡಿಗೆ ದರ ಕುರಿತು ನಗರಸಭೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಬಾಡಿಗೆದಾರರಾದ ಮಮತಾ ಮೇತ್ರಿ ಅವರ ವಿರುದ್ಧ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದ್ದು, ಅಂಗಡಿಯನ್ನು ನಗರಸಭೆಗೆ ಹಿಂತಿರಿಗಿಸುವಂತೆ ಆದೇಶ ಮಾಡಿದೆ. ಇದರ ಪ್ರಕಾರ ಮಂಗಳವಾರ ಸಂಜೆ ಪೌರಾಯುಕ್ತ ಡಾ. ಸೈಯ್ಯದ್ ಜಾಹೇದಾಲಿ ಅವರ ಆದೇಶದ ಮೆರೆಗೆ ನಗರಸಭೆ ಈ ಅಂಗಡಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ನಗರಸಭೆ ಕಂದಾಯ ಅಧಿಕಾರಿ ಪರಶುರಾಮ ಶಿಕ್ಕಲಗಾರ್, ಅಧಿಕಾರಿಗಳಾದ ಜಿ.ಟಿ. ಸುರೇಶ, ಉಲ್ಲಾಸ ಬಾಂದ್ಲೆಕರ್, ಉಲ್ಲಾಸ ದೇವಕರ್, ಪೊಲೀಸ್ ಸಿಬ್ಬಂದಿ ಇದ್ದರು.</