ಜಿಲ್ಲೆ

ವಾಟ್ಸ್ಆ್ಯಪ್ ವಿವಿಯವರು ಪುಸ್ತಕ ಓದಿ

ಕಲಬುರಗಿ: ಮಹಾತ್ಮ ಗಾಂಧಿ ಬಗ್ಗೆ ವಾಟ್ಸ್ಆ್ಯಪ್ ವಿಶ್ವವಿದ್ಯಾಲಯದಲ್ಲಿ ಓದಿದವರು ಗಾಂಧೀಜಿಯ ಹಂತಕ' ಪುಸ್ತಕವನ್ನು ಓದಬೇಕು. ಗೋಡ್ಸೆಯ ವೀಕ್ಷಿಪ್ತ ಮನಸ್ಥಿತಿ, ಗೋಡ್ಸೆ ಮತ್ತು ಆಪ್ಟೆ ರೈಲಿನಲ್ಲಿ ಹೋಗುವಾಗ ನಡೆದ ಘಟನೆ ಏನು ಎನ್ನುವ ಕುರಿತು ಲೇಖಕರು ಮೂಲ ದಾಖಲೆಯೊಂದಿಗೆ ವಿವರಿಸಿದ್ದಾರೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಶಿವಗಂಗಾ ರುಮ್ಮಾ ಹೇಳಿದರು. ನಗರದ ಜಗತ್ ವೃತ್ತದಲ್ಲಿರುವ ಶ್ರೀಮತಿ ನೀಲಗಂಗಮ್ಮ ಗುರಪ್ಪ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಧೀರೇಂದ್ರ ಕೆ.ಝಾ ಅವರು ಇಂಗ್ಲಿಷ್‌ನಲ್ಲಿ ಬರೆದು ಎ.ನಾರಾಯಣ ಮತ್ತು ಮನೋಜಕುಮಾರ ಗುದ್ದಿ ಕನ್ನಡಕ್ಕೆ ಅನುವಾದಿಸಿರುವಗಾಂಧೀಜಿಯ ಹಂತಕ' ಪುಸ್ತಕ ಸಂವಾದದಲ್ಲಿ ಮಾತನಾಡಿ, ಗಾಂಧಿ ಅನುಯಾಯಿಗಳಿಂದ ಅವರ ವಿರೋಧಿಗಳು, ಗೋಡ್ಸೆಯನ್ನು ಒಪ್ಪುವವರು ಪುಸ್ತಕ ಓದಬೇಕು ಎಂದು ಸಲಹೆ ನೀಡಿದರು.
ಪತ್ರಾಗಾರ ಕಚೇರಿ ಹಿರಿಯ ಸಹಾಯಕ ನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ ಮಾತನಾಡಿ, ಮಹಾತ್ಮ ಗಾಂಧಿ ಬಗ್ಗೆ ಪ್ರಸ್ತುತ ಕೇಳಿಬರುತ್ತಿರುವ ಅಪಶ್ರುತಿಗೆ ಪ್ರತಿಭಟನಾತ್ಮಕವಾಗಿ ಈ ಕೃತಿಯನ್ನು ನೋಡಬಹುದು. ಮೂಲ ಲೇಖಕರು ಇದುವರೆಗಿನ ಎಲ್ಲ ಸಿದ್ಧ ಮಾದರಿ ಬದಿಗೆ ಸರಿಸಿ ಪ್ರಾಥಮಿಕ ದಾಖಲೆ ಆಧಾರದೊಂದಿಗೆ ಪುಸ್ತಕ ಕಟ್ಟಿಕೊಟ್ಟಿz್ದÁರೆ. ವಿರೋಧಿಗಳ ಕಣ್ಣಿನಲ್ಲಿ ಗಾಂಧಿಯನ್ನು ಕಾಣುವ ಪ್ರಯತ್ನ ಲೇಖಕರು ಮಾಡಿz್ದÁರೆ ಎಂದರು.
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಬಸವಪ್ರಭು ಶಾಂತರಸ ಮಾತನಾಡಿ, ಲೇಖಕ ಧೀರೇಂದ್ರ ಝಾ ಊಹೆಗೆ ನಿಲುಕದಷ್ಟು ಆಕರಗಳನ್ನು ಬಳಸುವ ಮೂಲಕ ಕೃತಿ ವಸ್ತುನಿಷ್ಠವಾಗುವಂತೆ ಮಾಡಿz್ದÁರೆ. ಗಾಂಧೀಜಿ ಗೋಡ್ಸೆ ಕುರಿತು ಇತ್ತೀಚೆಗೆ ಬಂದಿರುವ ಪುಸ್ತಕಗಳ ಪೈಕಿ ಇದು ಮಹತ್ವದ್ದು ಎಂದು ವಿವರಿಸಿದರು.
ಪತ್ರಕರ್ತ ಕುಮಾರ ಬುರಡಿಕಟ್ಟಿ ಮಾತನಾಡಿ, ಗಾಂಧಿ, ಗೌರಿ ಲಂಕೇಶ, ಎಂ.ಎA.ಕಲಬುರಗಿ ಅವರನ್ನು ಕೊಂದ ಮನಸ್ಸುಗಳ ಸಾಮ್ಯತೆ ನಾವು ಅರ್ಥ ಮಾಡಿಕೊಳ್ಳಬೇಕು. ವಸ್ತುನಿಷ್ಠ ಚರಿತ್ರೆಯನ್ನು ಮೂಲ ದಾಖಲೆ ಸಮೇತ ಗೋಡ್ಸೆ, ಅವನ ಮನಸ್ಥಿತಿಯನ್ನು ಪುಸ್ತಕದ ಮೂಲ ಲೇಖಕರು ಕಟ್ಟಿಕೊಟ್ಟಿz್ದÁರೆ ಎಂದು ಹೇಳಿದರು.
ಪುಸ್ತಕದ ಕುರಿತು ಸಂವಾದ ನಡೆಯಿತು. ಅಬಕಾರಿ ಇಲಾಖೆ ಜಂಟಿ ಆಯುಕ್ತ ಬಸವರಾಜ ಹಡಪದ, ಗುವಿವಿ ಜೈವಿಕ ತಂತ್ರe್ಞÁನ ವಿಭಾಗದ ಮುಖ್ಯಸ್ಥ ಪ್ರೊ.ರಮೇಶ ಲಂಡನಕರ್, ಗಾಂಧಿ ವಿಚಾರ ವೇದಿಕೆ ವಿಭಾಗೀಯ ಅಧ್ಯಕ್ಷ ನೀಲೇಶ ಬೇನಾಳ, ಜಿ¯್ಲÁ ಕಾರ್ಯದರ್ಶಿ ಗಿರೀಶ ಪಾಟೀಲ್, ಪ್ರೊ.ಪಿ.ಬಿ.ಸಂತಪ್ಪನವರ, ಪಿ.ಮಾನು ಸಗರ, ಎಂ.ಸAಜೀವ, ಅಬ್ದುಲ್ ವಾಹೀದ್, ಪ್ರೊ.ಸುಜಾತಾ ಜಂಗಮಶೆಟ್ಟಿ, ಕಲಾವಿದೆ ಗಾಯತ್ರಿ ಶಿಲ್ಪಿ, ಸತೀಶ ಗುರಜಾಳಕರ್ ಇತರರಿದ್ದರು. ಕಲಾವಿದ ಕಿರಣ ಪಾಟೀಲ್ ನಿರೂಪಣೆ ಮಾಡಿದರು.