ವಿಜಯವಾಣಿ ಸುದ್ದಿಜಾಲ ಧಾರವಾಡ
ಬ್ಯಾಂಕಿಂಗ್ ಸೇವೆಗಳನ್ನು ಇನಷ್ಟು ಸುಲಭಗೊಳಿಸಲು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗ್ರಾಹಕರು ಮತ್ತು ಗ್ರಾಹಕರಲ್ಲದವರೂ ಬ್ಯಾಂಕಿಂಗ್ ಸೇವೆ ನಡೆಸಲು ಶುಕ್ರವಾರ ನಗರದ ಕೆವಿಜಿಬಿ ಮುಖ್ಯ ಕಚೇರಿಯಲ್ಲಿ ವಾಟ್ಸಾೃಪ್ ಬ್ಯಾಂಕಿಂಗ್‌ಗೆ ಚಾಲನೆ ನೀಡಯಿತು.
ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ವಾಟ್ಸಾೃಪ್ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿ, ತಂತ್ರಜ್ಞಾನದಿಂದ ನಡೆಸಲ್ಪಡುವ ಹಣಕಾಸು ಸೇವೆಗಳು ಹೆಚ್ಚಿನ ಸಾಮರ್ಥ್ಯ ಹೊಂದಿವೆ. ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸಲು ಬ್ಯಾಂಕ್ ಹಲವಾರು ಡಿಜಿಟಲ್ ಉಪಕ್ರಮ ಕೈಗೊಂಡಿದೆ. ಇದೀಗ ಹೊಸ ತಲೆಮಾರಿನ ಬ್ಯಾಂಕ್‌ಗಳಿಗೆ ಸರಿಸಮವಾಗಿ ವಾಟ್ಸಾೃಪ್ ಬ್ಯಾಂಕಿಂಗ್ ಸೇವೆ ಪರಿಚಯಿಸುತ್ತಿದೆ ಎಂದರು.
ಗ್ರಾಹಕರಿಗೆ ವಾಟ್ಸಾಪ್‌ನಲ್ಲಿ ತಮಗಿಷ್ಟವಾದ ಸಮಯದಲ್ಲಿ ಬ್ಯಾಂಕಿನೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ. ಖಾತೆ ವಿವರ, ಬ್ಯಾಲೆನ್ಸ್ ವಿಚಾರಣೆ, ಹಿಂದಿನ 5 ವಹಿವಾಟಿನ ಇತಿಹಾಸ ಸೇರಿ ಇತರ ಬ್ಯಾಂಕಿಂಗ್ ಸೇವೆಗಳನ್ನು ಸಲೀಸಾಗಿ ಪಡೆಯಬಹುದು. ಬ್ಯಾಂಕ್ ಠೇವಣಿ, ಸಾಲ ಉತ್ಪನ್ನಗಳು, ಬಡ್ಡಿ ದರ, ಡಿಜಿಟಲ್ ಉತ್ಪನ್ನ, ತಮ್ಮ ಸುತ್ತಲಿನ ಶಾಖೆ, ಎಟಿಎಂಗಳ ಪತ್ತೆ, ಇತರ ವಿವಿರಗಳನ್ನೂ ಪಡೆಯಬಹುದು ಎಂದರು.
ಬ್ಯಾಂಕಿನ ಮಾಹಿತಿ ತಂತ್ರಜ್ಞಾನ ವಿಭಾಗದ ಮಹಾ ಪ್ರಬಂಧಕ ಪುನೀತ ಎಂ. ಮಾತನಾಡಿದರು. ವಂದನಾ ಪೂಜಾರಿ, ನಂದಾ ಗುಳೇದಗುಡ್ಡ. ಪುಷ್ಪಲತಾ ಜಾಧವ, ರಾಜೇಶ್ವರಿ, ಇತರರು ಇದ್ದರು. ಬ್ಯಾಂಕಿನ ಮಾರುಕಟ್ಟೆ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ ಪ್ರಾಸ್ತಾವಿಕವಾಗಿ ಮಾತನಾಡಿದರು.