ಜಿಲ್ಲೆ

ವಾಟಾಳ್ ನಾಗರಾಜ್‌ಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಲಿ

ಎ.ಎಸ್.ಮಣಿಕಂಠ

ಚಾಮರಾಜನಗರ: ಕನ್ನಡ ಚಳವಳಿಗಾರ, ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ ಅವರಿಗೆ ಕೇಂದ್ರ ಸರ್ಕಾರದ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಲಿಸಬೇಕಿದೆ ಎಂದು ಬರಹಗಾರ ಲಕ್ಷ್ಮೀನರಸಿಂಹ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಶನಿವಾರ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಆಯೋಜಿಸಿರುವ ಕನ್ನಡ ರಾಜ್ಯೋತ್ಸವದ 23ನೇ ದಿನದ ಕಾರ್ಯಕ್ರಮದಲ್ಲಿ ವಾಟಾಳ್ ನಾಗರಾಜ್ ಕನ್ನಡ ಚಳವಳಿ ಕುರಿತು ಮಾತನಾಡಿದರು.

ರಾಜ್ಯದಲ್ಲಿ ವಾಟಾಳ್ ನಾಗರಾಜ್ ಜಾತ್ಯಾತೀತ ಕಾರಣಿಯಾಗಿದ್ದರು. ಕನ್ನಡ ಪರ ರಾಜಕಾರಣ ಮಾಡಿದರು. ಅವರು ಎಂದಿಗೂ ಜಾತಿ ರಾಜಕಾರಣ ಮಾಡಲಿಲ್ಲ. ಸದಾ ಕನ್ನಡದ ಕಟ್ಟಾಳಾಗಿರುವ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಗಿಂತಲೂ, ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸುವ ಕೆಲಸ ಆಗಬೇಕು ಎಂದರು.

ಕನ್ನಡ ಮಹಾಸಭಾ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ವಾಟಾಳ್ ನಾಗರಾಜ್ ಅವರು ಬೇರೆ ಪಕ್ಷದೊಂದಿಗೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿದ್ದರೆ ಮುಖ್ಯಮಂತ್ರಿ ಆಗಬಹುದಿತ್ತು. ಬೆಂಗಳೂರು ಪುರಸಭಾ ಸದಸ್ಯರಾಗಿ ರಾಜಕಾರಣ ಪ್ರವೇಶ ಮಾಡಿದ ಅವರು, ಬೆಂಗಳೂರಿನಲ್ಲಿ 2 ಬಾರಿ ಚಾಮರಾಜನಗರದಲ್ಲಿ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಅನೇಕ ಜನಪರ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ, ಡಾ.ಪರಮೇಶ್ವರಪ್ಪ, ಶಾ.ಮುರಳಿ, ಚಾ.ವೆಂ.ರಾಜ್ ಗೋಪಾಲ್, ಪಣ್ಯದಹುಂಡಿ ರಾಜು, ನಂಜುಂಡಶೆಟ್ಟಿ, ಬಸವರಾಜು ನಾಯಕ, ಓಂ ಶಾಂತಿ ಆರಾಧ್ಯ, ಶಿವಲಿಂಗಮೂರ್ತಿ, ರವಿಚಂದ್ರಪ್ರಸಾದ್ ಕಹಳೆ, ತಾಂಡವಮೂರ್ತಿ, ವೀರಭದ್ರ, ಲಿಂಗರಾಜು, ರಾಚಪ್ಪ ಇತರರು ಹಾಜರಿದ್ದರು.