ಜಿಲ್ಲೆ

ವಾಟರಮನ್ ಅನಾರೋಗ್ಯಕ್ಕೆ ಮಿಡಿದ ಹೃದಯ, ವೈಯಕ್ತಿಕ ಧನ ಸಹಾಯ ನೀಡಿ ನೋವಿಗೆ ಸ್ಪಂದಿಸಿದ ಶಾಸಕ...!

ವಿಜಯಪುರ: ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅತ್ಯಂತ ಕೆಳದರ್ಜೆಯ ನೌಕರರ ಸ್ಥಿತಿ ದೇವರಿಗೆ ಪ್ರೀತಿ. ಅದರಲ್ಲೂ ಗ್ರಾಮ ಪಂಚಾಯಿತಿಯ ನೀರ್ಗಂಟಿಗಳ ಸ್ಥಿತಿ ಇನ್ನೂ ಶೋಚನೀಯವಾಗಿದ್ದು, ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೀರ್ಗಂಟಿಯ ಸಮಸ್ಯೆಗೆ ಶಾಸಕನೋರ್ವನ ಮನ ಮಿಡಿದಿದೆ.

ನಾಗಠಾಣ ವಿಧಾನ ಸಭೆ ಕ್ಷೇತ್ರದ ಶಾಸಕ ಡಾ.ದೇವಾನಂದ ಚವಾಣ್ ಮಾನವೀಯ ಸೇವೆ ಸಲ್ಲಿಸಿ ಗಮನ ಸೆಳೆದಿದ್ದಾರೆ. ಕೆಲವು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯಪುರ ತಾಲೂಕಿನ ಕುಮುಟಗಿ ಗ್ರಾಮದ ನೀರ್ಗಂಟಿ ಬಾಬು ಈಸರಗೊಂಡ ಅಪಘಾತಗೊಂಡಗೆ ಶಾಸಕ ದೇವಾನಂದ ಚವಾಣ್ ನೆರವು ನೀಡಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಸಮಸ್ಯೆ ಆಲಿಸಿದ ಶಾಸಕ ದೇವಾನಂದ ವೈಯಕ್ತಿಕವಾಗಿ ಧನ ಸಹಾಯ ನೀಡಿದರು. ಸ್ಥಳದಲ್ಲಿದ್ದ ಗ್ರಾಮ ಮುಖಂಡರು ಹಾಗೂ ಕುಟುಂಬಸ್ಥರು ಶಾಸಕರ ಮಾನವೀಯ ಕಳಕಳಿಗೆ ಮೆಚ್ಚಿಗೆ ವ್ಯಕ್ತಪಡಿಸಿದರು.