?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ವಸ್ತುನಿಷ್ಠವಾದ ದತ್ತಾಂಶ ಸಂಗ್ರಹಿಸಿ

ಹನೂರು: ಯಾವುದೇ ಲೋಪವಿಲ್ಲದಂತೆ ವಸ್ತುನಿಷ್ಠವಾದ ದತ್ತಾಂಶ ಸಂಗ್ರಹಿಸುವುದರ ಮೂಲಕ ಕೃಷಿ ಗಣತಿ ಕಾರ್ಯ ಯಶಗೊಳಿಸಬೇಕು ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಸಾಂಖ್ಯಿಕ ನಿರ್ದೇಶನಾಲಯದ ವತಿಯಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಕೃಷಿ ಗಣತಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಕೃಷಿ ಗಣತಿಯು ರಾಜ್ಯದಲ್ಲಿ ಕೃಷಿ ಅಭಿವೃದ್ಧಿಗಾಗಿ ಹೊಸ ಕಾರ್ಯಕ್ರಮ ರೂಪಿಸಲು ಹಾಗೂ ಆರ್ಥಿಕ ಮತ್ತು ಸಾಮಾಜಿಕ ನೀತಿಯನ್ನು ರಚಿಸುವ ಮುಖ್ಯ ಉದ್ದೇಶ ಹೊಂದಿದೆ. ಆದ್ದರಿಂದ ವಿವಿಧ ವರ್ಗದ ಕೃಷಿ ಹಿಡುವಳಿಗಳ ವಿಸ್ತೀರ್ಣ, ಭೂ ಬಳಕೆ, ನೀರಾವರಿ, ಬೆಳೆ ಪದ್ಧತಿ, ಸಾವಯವ ಹಾಗೂ ರಸಗೊಬ್ಬರದ ಬಳಕೆ ಹಾಗೂ ಕೃಷಿ ಪದ್ಧತಿಗೆ ಸಂಬಂಧಿಸಿದಂತೆ ಸ್ವರೂಪ ಹಾಗೂ ಗುಣಲಕ್ಷಣದ ಬಗ್ಗೆ ನಿಖರವಾದ ಅಂಕಿ ಅಂಶಗಳನ್ನು ಸಂಗ್ರಹಿಸಬೇಕಿದೆ. ಇದು ದೇಶದ ಅಭಿವೃದ್ಧಿಗೆ ಪೂರಕ ಎಂದರು.

ತಾಲೂಕಿನಲ್ಲಿ ಶೇ. 70ರಷ್ಟು ಭೂ ಪ್ರದೇಶ ಅರಣ್ಯದಿಂದ ಆವೃತವಾಗಿದೆ. ಶೇ.30ರಷ್ಟು ಪ್ರದೇಶದಲ್ಲಿ ಜನವಸತಿ ಒಳಗೊಂಡಂತೆ ರೈತರು ಕೃಷಿಯನ್ನು ಅವಲಂಬಿಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ತರಬೇತಿಯ ಪ್ರಯೋಜನ ಪಡೆದುಕೊಂಡು ಕೃಷಿ ಗಣತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ವಸ್ತುನಿಷ್ಠವಾದ ಅಂಕಿಅಂಶ ಸಂಗ್ರಹ ಮಾಡಿ ವರದಿ ಸಲ್ಲಿಸಬೇಕು. ಒಂದು ವೇಳೆ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಸಲಹೆ ಪಡೆದು ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಸುನೀತಾ, ಯೋಗೇಶ್, ರಾಜಸ್ವ ನಿರೀಕ್ಷಕರಾದ ಶಿವಕುಮಾರ್, ಮಹದೇವಸ್ವಾಮಿ, ಪ್ರಭಾರ ಆರ್‌ಐ ಶೇಷಣ್ಣ, ಗ್ರಾಮ ಆಡಳಿತ ಅಧಿಕಾರಿಗಳಾದ ರಾಜು, ರಂಗಸ್ವಾಮಿ, ಕಾರ್ತಿಕ್ ಹಾಗೂ ಇನ್ನಿತರರು ಇದ್ದರು.