ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ 
ಜಿಲ್ಲೆ

ವಸೂಲಿಗಾಗಿಯೇ ಪಿಎಗಳನ್ನು ನೇಮಿಸಿಕೊಂಡಿರುವ ಹೆಬ್ಬಾಳ್ಕರ್

ಚಿಕ್ಕಮಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರ ನಡುವಿನ ಆರೋಪ, ಪ್ರತ್ಯೋರೋಪಗಳು ದಿನೇ ದಿನೇ ಜೋರಾಗುತ್ತಿದ್ದು, ಇದೀಗ ಸಿ.ಟಿ. ರವಿ ಅವರು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಅವರಿಗೆ ವಸೂಲಿಗೆ ಎಂದೇ ಪಿಎಗಳು ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಲಕ್ಷಿö್ಮÃ ಹೆಬ್ಬಾಳ್ಕರ್ ಅವರಿಗೆ ವಸೂಲಿಗೆ ಪಿಎಗಳು ಇದ್ದಾರೆ ಎಂದು ಮೊನ್ನೆ ಗೊತ್ತಾಗಿದೆ. ಅನಧಿಕೃತವಾಗಿ ಸಾಕಷ್ಟು ಜನ ಪಿಎಗಳು ಇದ್ದಾರೆ ಆ ತಾಯಿ ಬಳಿ ಎಂದು ಹೇಳಿದರು.

ಬೆಳಗಾವಿಯ ಖಾನಾಪುರ ಸಿಪಿಐ ಅಮಾನತು ಪ್ರಕರಣಕ್ಕೆ ಸಂಬAಧಿಸಿದAತೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಅಮಾನತು ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಕ್ರಮ ಆಗಬೇಕಿರುವುದು ಎಸ್ಪಿ ಹಾಗೂ ಕಮಿಷನರ್ ಮೇಲೆ. ಅಮಾನತು ಮಾಡಬೇಕಿರೋದು ಶಾರೀರಿಕವಾಗಿ, ಮಾನಸಿಕವಾಗಿ ದೌರ್ಜನ್ಯ ಮಾಡಿದವರನ್ನು. ಅಲ್ಲಿ ಕಮಿಷನರ್ ಇದ್ದರು ಎಂದರು.

ಸದನದೊಳಗೆ ಹಾಗೂ ಹೊರ ಭಾಗದಲ್ಲಿ ಸಿಸಿಟಿವಿ, ವಿಡಿಯೋ ಎಲ್ಲಾ ಇದೆ. ಅಲ್ಲಿದ್ದವರು ಯಾರು ಅಪರಿಚಿತರಲ್ಲ. ಹೆಬ್ಬಾಳ್ಕರ್ ಪಿಎ ಅವರ ಜೊತೆ ಇದ್ದವರೇ ನನ್ನ ಮೇಲೆ ಹಲ್ಲೆ ಮಾಡಿದ್ದು. ಈ ಬಗ್ಗೆ ಡಿ. ೧೯ರಂದು ದೂರು ನೀಡಿz್ದೆÃನೆ. ಈವರೆಗೆ ಎಫ್‌ಐಆರ್ ಆಗಿಲ್ಲ. ಅದೇ ದಿನ ೧೦ ಜನರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಟ್ಟು ಕಳುಹಿಸಿದ್ದಾರೆ. ಅದ್ದರಿಂದ ಕಮಿಷನರ್ ಅವರನ್ನು ಅಮಾನತು ಮಾಡಬೇಕು ಎಂದರು.

ನನ್ನ ಮೇಲೆ ಆಳುವ ಪಕ್ಷದಿಂದ ದೌರ್ಜನ್ಯ ನಡೆದಿದೆ. ಹಾಗಾಗಿ ಆಳುವ ಪಕ್ಷದ ಅಧೀನದಲ್ಲಿರುವ ಸಂಸ್ಥೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತದೆ ಎಂಬ ನಂಬಿಕೆ ಇಲ್ಲ. ಹಾಗಾಗಿ ರಾಜ್ಯಪಾಲರು, ಸಭಾಪತಿಗಳು ಹಾಗೂ ಡಿಜಿಪಿ ಅವರನ್ನು ಭೇಟಿ ಮಾಡುತ್ತೇನೆ. ಕಾನೂನು ಪ್ರಕ್ರಿಯೆ ಮುಂದುವರೆಸುತ್ತೇನೆ. ಡಿ. ೨೬ ಹಾಗೂ ೨೭ ರಂದು ಪಕ್ಷದ ರಾಷ್ಟಿçÃಯ ಹಾಗೂ ರಾಜ್ಯದ ಪ್ರಮುಖರನ್ನು ಭೇಟಿ ಮಾಡಿ ಮುಂದಿನ ನಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಹರಕೆ

ನನ್ನ ಬಗ್ಗೆ ಆಕ್ಷೇಪಾರ್ಹ ಪದ ಬಳಸಿಲ್ಲ ಎಂದಾದರೆ ಧರ್ಮಸ್ಥಳಕ್ಕೆ ಬನ್ನಿ, ನಾನು ಕೂಡ ಕುಟುಂಬ ಸಮೇತರಾಗಿ ಬರ್ತಿನಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ಪಂಥಾಹ್ವಾನಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ನ್ಯಾಯಾಲಯದಲ್ಲಿ ಕೇಸ್ ಇದೆ. ತನಿಖೆಯ ಹಂತದಲ್ಲಿ ಮಾತನಾಡುವುದು ಸರಿಯಲ್ಲ. ಕೇಸನ್ನು ಎದುರಿಸಿದ ನಂತರ ಧರ್ಮಸ್ಥಳಕ್ಕೂ ಹೋಗ್ತಿನಿ, ನನ್ನನ್ನು ವಾಹನದಲ್ಲಿ ಪೊಲೀಸರು ಕರೆದುಕೊಂಡು ಹೋಗುವಾಗ ಸವದತ್ತಿ ಯಲ್ಲಮ್ಮ ದೇವರಿಗೆ ಹರಕೆ ಹೊತ್ತಿದ್ದೆ ಅಲ್ಲಿಗೂ ಕೂಡ ಹೋಗುತ್ತೇನೆ ಎಂದರು.

ಗೂಂಡಾ ರಾಜ್ಯ ಆಗಿದೆ

ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಇದೊಂದು ಗೂಂಡಾ ರಾಜ್ಯ ಆಗಿದೆ. ತುರ್ತು ಪರಿಸ್ಥಿತಿಯನ್ನೇ ಎದುರಿಸಿz್ದÉÃವೆ. ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ ಮಾಡಿz್ದÉÃವೆ. ಈ ಗೂಂಡಾಗಿರಿಗೆ ಹೆದರುವುದಿಲ್ಲ, ಗೂಂಡಾಗಿರಿ ಮಾಡಿದವರನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯ ಬಳಿಕ ದೂರವಾಣಿ ಮೂಲಕ ಶಾಸಕ ಮುನಿರತ್ನ ಅವರಿಗೆ ಧೈರ್ಯ ಹೇಳಿದ ಸಿ.ಟಿ. ರವಿ, ಆರೋಗ್ಯದ ಕಡೆ ಗಮನ ಹರಿಸಿ, ಧೃತಿಗೆಡಬೇಡಿ ನಾವು ನಿಮ್ಮ ಜೊತೆಗಿz್ದÉÃವೆ ಎಂದು ಹೇಳಿದರು.