ಜಿಲ್ಲೆ

ವಸತಿ ಶಾಲೆ ವಿದ್ಯಾರ್ಥಿಗಳಿಗೆ ವಿವಿಧ ಸಾಮಗ್ರಿ ವಿತರಣೆ

ಕೆ.ಆರ್.ಸಾಗರ: ಬೆಳಗೊಳ ಗ್ರಾಮದ ಮೌಂಟ್‌ಫೌರ್ಟ್ ವಸತಿ ಶಾಲೆ ವಿದ್ಯಾರ್ಥಿಗಳಿಗೆ ತಮಿಳುನಾಡಿನ ಕೃಷ್ಣಗಿರಿಯ ಐ.ವಿ.ಡಿ.ಪಿ.(ಇಂಟಿಗ್ರೇಟೆಡ್ ವಿಲೇಜ್ ಡೆವಲಂಪ್‌ಮೆಂಟ್ ಪ್ರಾಜೆಕ್ಟ್) ಸಂಸ್ಥಾಪಕ ಅಧ್ಯಕ್ಷ ಕುಲಂದೈ ಫ್ರಾನ್ಸಿಸ್ ಅವರು 11 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಗುರುವಾರ ವಿತರಣೆ ಮಾಡಿದರು.


ವಿಶೇಷ ಮಕ್ಕಳಿಗೆ ಸಮವಸ್ತ್ರ, ಶೂ, ಬ್ಯಾಗ್, ದಿಂಬು, ಹೊದಿಕೆ, ಆಟದ ವಸ್ತುಗಳು, ಆರೈಕೆ ವಸ್ತುಗಳನ್ನು ವಿತರಣೆ ಮಾಡಿ ಮಾತನಾಡಿದ ಕುಲಂದೈ ಫ್ರಾನ್ಸಿಸ್, ವಿಶೇಷ ಮಕ್ಕಳಿಗೂ ಎಲ್ಲ ರೀತಿಯ ಸವಲತ್ತು ಸಿಗಬೇಕು ಎನ್ನುವುದು ಸಂಸ್ಥೆಯ ಉದ್ದೇಶ ಎಂದು ಹೇಳಿದರು.


ಅವರೂ ಸಾಮಾನ್ಯ ಮಕ್ಕಳಂತೆ ವಿದ್ಯಾಭ್ಯಾಸ ಮಾಡಬೇಕು. ಹಾಗಾಗಿ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದೇನೆ. ಅವರಿಗೆ ಯಾವುದೇ ಕೊರತೆ ಉಂಟಾಗಬಾರದು. ವಿಶೇಷ ಮಕ್ಕಳ ವಿದ್ಯಾಭ್ಯಾಸ ಮಾಡಿಸುವುದು ಶಿಕ್ಷಕರಿಗೆ ಸವಾಲಾಗಿದೆ. ಅವರಿಂದಲೇ ವಿಶೇಷ ಮಕ್ಕಳು ಮುಂದಿನ ಜೀವನ ರೂಪಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಬೆಂಗಳೂರು ವಲಯದ ಬ್ರದರ್ ಜಾರ್ಜ್ ಪಡಿಕೆರ್, ಮೌಂಟ್‌ಫೌರ್ಟ್‌ನ ವಿದ್ಯಾಸಾಗರ, ಮುಖ್ಯೋಪಾಧ್ಯಾಯ ಬ್ರದರ್ ಆಲಬನರಾಜ್, ಬ್ರದರ್ ವಿಜಯ ಸೆಬಸ್ಟಿನ್, ಬ್ರದರ್ ಲಾಂಬರ್ಟ್, ಬ್ರದರ್ ಜೆಬಮಲೈ ಇತರರು ಇದ್ದರು.