ನ್ಯಾಮತಿ: ವಲಸೆ ಹೋಗುವವರ ಮಕ್ಕಳ ಅನುಕೂಲಕ್ಕಾಗಿ ವಸತಿ ಶಾಲೆ ಸ್ಥಾಪಿಸಲಿದ್ದು, ಈಗಾಗಲೇ ಜಮೀನು ಖರೀದಿಸಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಎಂ.ಲಮಾಣಿ ಹೇಳಿದರು.
ತಾಲೂಕಿನ ಸಂತ ಸೇವಾಲಾಲ್ ಜನ್ಮಸ್ಥಳ ಸೂರಗೊಂಡನಕೊಪ್ಪ (ಭಾಯಾಗಡ್)ದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಭಾನುವಾರ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯಿಂದ ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವಿಗೆ ವಿಶೇಷ ಪೂಜೆ ಹಾಗೂ ಭೋಗ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಸಜೋಗದಿಂದ ಚಿನ್ನಿಕಟ್ಟೆ ಗ್ರಾಮದವರೆಗೂ ದ್ವಿಪಥ ರಸ್ತೆ, ಶಾಶ್ವತ ಹೆಲಿಪ್ಯಾಡ್ ಕಾಮಗಾರಿ ನಿರ್ಮಾಣ ಮಾಡಲಾಗುವುದು ಎಂದರು.
ತಾಂಡಾ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಜಯದೇವನಾಯ್ಕ ಮಾತನಾಡಿ, ಬಂಜಾರ ಸಮುದಾಯದ ಧರ್ಮಗುರುಗಳ ಕುಂದುಕೊರತೆಗಳು ಮತ್ತವರ ಬೇಡಿಕೆಗಳ ಈಡೇರಿಸಲು ನಿಗಮದ ಕಚೇರಿಯಲ್ಲಿ ಸಭೆ ಕರೆದು ಈಡೇರಿಸುತ್ತೇವೆ ಎಂದರು.
ಸರಿಗಮಪ ಸಂಗೀತ ಕಾರ್ಯಕ್ರಮದ ಸೀಸನ್ 20 ರ ರನ್ನರ್‌ಅಪ್ ರಮೇಶ ಲಮಾಣಿ ಅವರನ್ನು ಸನ್ಮಾನಿಸಲಾಯಿತು.
ಮಹಾಮಠ ನಿರ್ವಹಣಾ ಸಮಿತಿ ಅಧ್ಯಕ್ಷ ಹನುಮಂತ ನಾಯ್ಕ, ಧರ್ಮಗುರುಗಳಾದ ಸೈನಾಭಗತ್‌ಸ್ವಾಮಿ, ಸರ್ದಾರ್ ಸೇವಾಲಾಲ್ ಸ್ವಾಮಿ, ಶಿವಪ್ರಕಾಶ ಸ್ವಾಮಿ, ಪ್ರತಿಷ್ಠಾನದ ಯೋಜನೆಯ ನಿರ್ದೇಶಕ ಜೆ.ಹರೀಶ್, ಸಮಿತಿಯ ನಿರ್ದೇಶಕರಾದ ರೇಣುಕಾನಾಯ್ಕ, ಭೋಜಾನಾಯ್ಕ, ಸಮಿತಿ ಸದಸ್ಯರಾದ ಬಿ.ಸಿ. ಎಂಕ್ಯಾನಾಯ್ಕ, ಓಂಕಾರಿ ನಾಯ್ಕ, ಸೋಮ್ಲಾನಾಯ್ಕ, ಸುರೇಶನಾಯ್ಕ, ಪೀರ‌್ಯಾನಾಯ್ಕ, ಕುಬೇರ್ ನಾಯ್ಕ, ಈಶ್ವರನಾಯ್ಕ, ಸಮಿತಿಯ ಆಡಳಿತಾಧಿಕಾರಿ ಸೇವ್ಯಾನಾಯ್ಕ, ಕಾರ್ಯದರ್ಶಿ ನರೇನಹಳ್ಳಿ ಅರುಣಕುಮಾರ್ ಇತರರಿದ್ದರು.