ಜಿಲ್ಲೆ

ವಸತಿ ನಿಲಯಕ್ಕೆ ಡಿಸಿ ಅತುಲ್ ಭೇಟಿ


ಕೊಪ್ಪಳ: ಜಿಲ್ಲಾಧಿಕಾರಿ ನಲಿನ್ ಅತುಲ್ ಮಂಗಳವಾರ ತಾಲೂಕಿನ ಗಿಣಿಗೇರಾ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ವಿದ್ಯಾರ್ಥಿಗಳ ವಸತಿ ಗೃಹ ಮತ್ತು ಅಡುಗೆ ಕೊಠಡಿ ವೀಕ್ಷಿಸಿದರು. ವಸತಿ ನಿಲಯದಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು. ಗಿಡಮರಗಳನ್ನು ಬೆಳೆಸಿ ಸುಂದರ ಪರಿಸರ ನಿರ್ಮಾಣ ಮಾಡಿ. ಗುಣಮಟ್ಟದ ಆಹಾರ ವಿತರಿಸಿ. ಎಲ್ಲ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ, ಓದಲು ಉತ್ತಮ ಪುಸ್ತಕಗಳ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯಾರ್ಥಿಗಳು ಅಧ್ಯಯನಶೀಲರಾಗುವಂತೆ ಸಲಹೆ ನೀಡಿದರು. ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ತಹಸೀಲ್ದಾರ ವಿಠ್ಠಲ್ ಚೌಗಲಾ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯಲ್ಲಪ್ಪ ಕಾಳೆ ಇತರರಿದ್ದರು.