ಜಿಲ್ಲೆ

ವಸತಿ ನಿಲಯ, ಮೆಡಿಕಲ್ ಕಾಲೇಜಿಗೆ ಭೇಟಿ

ಯಾದಗಿರಿ: ವಸತಿ ನಿಲಯವನ್ನು ನಿಮ್ಮ ಮನೆ ಎಂದು ಪರಿಗಣಿಸಿ ಶ್ರಮದಾನ ಮಾಡಿ ಸ್ವಚ್ಚವಾಗಿಟ್ಟುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಮನೋಜ್ ಜೈನ್ ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಗುರುವಾರ ಬೆಳಗ್ಗೆ ತಾಲೂಕಿನ ಬಂದಳ್ಳಿ ಗ್ರಾಮದ ಹತ್ತಿರವಿರುವ ಮೆಟ್ರಿಕ್ ನಂತರದ ಅಲ್ಪಸಂಖ್ಯಾತ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ವಚ್ಛತೆಗೆ ಮೊದಲ ಆದ್ಯತೆ ಕೊಡಬೇಕು. ಕುಡಿಯುವ ನೀರು, ಶೌಚಗೃಹ, ಊಟದ ಮನೆ, ಅಡುಗೆ ಕೋಣೆ, ಸುತ್ತಲಿನ ಪರಿಸರ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಲ್ಲಿ ಸಿಬ್ಬಂದಿ ವರ್ಗದ ಜತೆಗೆ ವಿದ್ಯಾಥರ್ಿಗಳ ಪಾತ್ರ ಸಹ ಬಹಳ ಮುಖ್ಯವಾಗಿದೆ. ಮುಂದಿನವರಿಗೆ ನೀವು ಮಾದರಿಯಾಗಿರಬೇಕು ಎಂದರು.
ವಸತಿ ನಿಲಯದ ಊಟ ಉಪಹಾರ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದ ಜೈನ್, ಮಕ್ಕಳಿಗೆ ಗುಣಮಟ್ಟದ ಊಟ ನೀಡಿ, ಈ ವಿಷಯದಲ್ಲಿ ಯಾವುದೇ ಲೋಪವಾಗಬಾರದು ಎಂದು ಮೇಲ್ವಿಚಾರಕರಿಗೆ ತಾಕೀತು ಮಾಡಿದರು. ನಂತರ ಸಕರ್ಾರಿ ಮೆಡಿಕಲ್ ಕಾಲೇಜು, ಜಿಲ್ಲಾಸ್ಪತ್ರೆ, ಹಳೇ ಆಸ್ಪತ್ರೆ, ಅಲ್ಲಿಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುದರು. ಜಿಲ್ಲೆಯಲ್ಲಿ ಒಳ್ಳೆಯ ಸುಸಜ್ಜಿತ ಕಟ್ಟಡಗಳು ತಲೆಯೆತ್ತಿ ನಿಲ್ಲುತ್ತಿವೆ. ಮೂಲ ಸೌಕರ್ಯಗಳ ಜತೆಗೆ ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಜಿಲ್ಲೆಗೆ ಹೊಸ ಸಕರ್ಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದ್ದು, ಜನತೆಯ ಬಹುದಿನಗಳ ಕನಸು ನನಸಾಗಿದೆ. ಮೆಡಿಕಲ್ ಕಾಲೇಜಿನ ವಿದ್ಯಾಥರ್ಿಗಳು ಈ ಸೌಲಭ್ಯದ ಸದುಪಯೋಗ ಪಡೆದುಕೊಂಡು ಒಳ್ಳೆಯ ವೈದ್ಯರಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.

ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ, ಅಲ್ಪಸಂಖ್ಯಾತರ ಇಲಾಖೆ ಅಕಾರಿ ಪ್ರವೀಣಕುಮಾರ, ಜಿಲ್ಲಾ ಆರೋಗ್ಯಾಕಾರಿ ಡಾ.ಗುರುರಾಜ ಹಿರೇಗೌಡ, ವೈದ್ಯಕೀಯ ಕಾಲೇಜಿನ ಡೀನ್ ಡಾ.ಹನುಮಂತ ಪ್ರಸಾದ್ ಇದ್ದರು.