ಜಿಲ್ಲೆ

ವಸತಿ ಗೃಹ ಕಾಮಗಾರಿಗೆ ಭೂಮಿಪೂಜೆ

ರೋಣ: ಕ್ಷೇತ್ರದಲ್ಲಿ ಅಗತ್ಯ ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ಕೆಆರ್​ಐಡಿಎಲ್ ವತಿಯಿಂದ 15 ಲಕ್ಷ ರೂ. ವೆಚ್ಚದಲ್ಲಿ ನಿರ್ವಣಗೊಳ್ಳಲಿರುವ ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿಗಳ ವಸತಿ ಗೃಹ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕುಡಿಯುವ ನೀರು, ರಸ್ತೆ, ಅಧಿಕಾರಿಗಳ ವಸತಿ ಗೃಹಗಳು ಹಾಗೂ ಅಗತ್ಯ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸಲಾಗುವುದು. ಗುತ್ತಿಗೆದಾರರು ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು.

ಎಪಿಎಂಸಿ ಅಧ್ಯಕ್ಷ ರಾಜಣ್ಣ ಹೂಲಿ, ಬಿಜೆಪಿ ಮುಖಂಡರಾದ ಅಶೋಕ ನವಲಗುಂದ, ಮುತ್ತಣ್ಣ ಲಿಂಗನಗೌಡ್ರ, ಬಸವರಾಜ ಕೊಟಗಿ, ಗ್ರಾ.ಪಂ. ಸದಸ್ಯರಾದ ಚಂದ್ರಶೇಖರ ಪಾಟೀಲ, ಸುಭಾಸ ಗೊರವರ ಇತರರಿದ್ದರು.