ಜಿಲ್ಲೆ

ವರ್ಷಿಣಿ ಮಿಸ್ ಧಾರವಾಡ

ಧಾರವಾಡ: ನಗರದ ಸುದಿಶಾ ಇವೆಂಟ್ಸ್ ಸಂಸ್ಥೆಯು ಸ್ವಾತಂತ್ರ್ಯೊತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಮಿಸ್ ಧಾರವಾಡ-2020 ಸ್ಪರ್ಧೆಯಲ್ಲಿ ವರ್ಷಿಣಿ ರಾಮಡಗಿ ಮಿಸ್ ಧಾರವಾಡ ಆಗಿ ಹೊರಹೊಮ್ಮಿದ್ದಾರೆ ಎಂದು ಸಂಸ್ಥೆ ಮುಖ್ಯಸ್ಥ ರಾಘವೇಂದ್ರ ಕುಂದಗೋಳ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 15 ರಂದು ಏರ್ಪಡಿಸಿದ್ದ 80ಕ್ಕೂ ಹೆಚ್ಚು ಯುವತಿಯರು ಪಾಲ್ಗೊಂಡಿದ್ದರು. ವರ್ಷಿಣಿ (ಪ್ರಥಮ), ನಾಗವೇಣಿ ಕಡಗದ ಹಾಗೂ ಕೃತಿಕಾ ಅಳಗವಾಡಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದರು.

ನಿರ್ಣಾಯಕರಾಗಿ ಸಂಘಟಕ ಮಾರ್ತಾಂಡಪ್ಪ ಕತ್ತಿ, ಪದ್ಮಾವತಿ ಪತ್ತಾರ, ಚಂದ್ರಿಕಾ ಕರವೀರಮಠ ಭಾಗವಹಿಸಿದ್ದರು. ಸುದಿಶಾ ಇವೆಂಟ್ಸ್ ವತಿಯಿಂದ ಗಣೇಶ ಅಲಂಕಾರ ಸ್ಪರ್ಧೆಯನ್ನು ಆನ್​ಲೈನ್​ನಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.

ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಉಪಾಧ್ಯಕ್ಷ ಬಸವರಾಜ ಗುರಿಕಾರ, ಪ್ರಲ್ಹಾದ ಗೆಜ್ಜಿ, ಇತರರು ಇದ್ದರು.